ಆಮಂತ್ರಣ ಪತ್ರಿಕೆ ಬಿಡುಗಡೆ – ಸಿದ್ಧತೆ ಕುರಿತು ಸಭೆ
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವರ್ಷಪ್ರತಿಯಂತೆ ದಶಂಬರ್ 16 ರಿಂದ ಧನು ಪೂಜೆ ಆರಂಭಗೊಳ್ಳಲಿದೆ. ಒಂದು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ ಕ್ಷೇತ್ರದಲ್ಲಿ ಧನು ಪೂಜೆ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ.















ಧನು ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜೀರ್ಣೋದ್ದಾರ ಸಮಿತಿ ನೇತೃತ್ವದಲ್ಲಿ ನ. 29ರಂದು ದೇವಸ್ಥಾನದ ಅಕ್ಷಯ ಸಭಾಂಗಣದಲ್ಲಿ ನಡೆಯಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿಬಿ ದಿವಾಕರ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ವ್ಯವಸ್ಥಾಪನ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ವೇದಿಕೆಯಲ್ಲಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ತಿಮ್ಮಯ್ಯ ಮೆತ್ತಡ್ಕ, ಕೆ ಕೆ ಬಾಲಕೃಷ್ಣ, ಮಾಲತಿ ಭೋಜಪ್ಪ, ಚಂಚಲಾಕ್ಷಿ ನಾಗೇಂದ್ರ ಕುಲ್ಚಾರು , ತೀರ್ಥರಾಮ ಪರ್ನೋಜಿ, ವಸಂತ ಪೆಲ್ತಡ್ಕ, ಮಾಜಿ ಸದಸ್ಯರುಗಳಾದ ಕೆ ಕೆ ನಾರಾಯಣ, ಎಸ್. ಪಿ. ಲೋಕನಾಥ, ಗಣಪತಿ ಭಟ್, ತಾ. ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಭಜನಾ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ, ಜನಾರ್ಧನ ಬಾಳೆಕಜೆ, ಮಹೇಶ್ ಕುತ್ತಮೊಟ್ಟೆ, ಕಮಲಾಕ್ಷ ಪಡ್ಪು, ಕದಿರೇಶನ್ ಪಿಲೈ ಅವಿನಾಶ್ ಬಸ್ ನ ಮಾಲಕ ಅವಿನಾಶ್ ರೈ ಸಭೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಕಚೇರಿ ವ್ಯವಸ್ಥಾಪಕರಾದ ಆನಂದ ಕಲ ಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ದೇವಳದ ಸಿಬ್ಬಂದಿಗಳು ಸಹಕರಿಸಿದರು.



