Home ಪ್ರಚಲಿತ ಸುದ್ದಿ ಆಲೆಟ್ಟಿ ಸದಾಶಿವ ದೇವಳದ ಎದುರಿನ ಮೈದಾನದಲ್ಲಿ ಹಗ್ಗ ಜಗ್ಗಾಟದ ತರಬೇತಿ ಕೇಂದ್ರ ಸಿಂಹ ಘಡ ಉದ್ಘಾಟನೆ

ಆಲೆಟ್ಟಿ ಸದಾಶಿವ ದೇವಳದ ಎದುರಿನ ಮೈದಾನದಲ್ಲಿ ಹಗ್ಗ ಜಗ್ಗಾಟದ ತರಬೇತಿ ಕೇಂದ್ರ ಸಿಂಹ ಘಡ ಉದ್ಘಾಟನೆ

0

ಆಸಕ್ತ ಯುವಕ, ಯುವತಿಯರಿಗೆ ತರಬೇತಿ ಪಡೆಯಲು ಮುಕ್ತ ಅವಕಾಶ

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಹಗ್ಗಜಗ್ಗಾಟ ತರಬೇತಿ ಕೇಂದ್ರ “ಸಿಂಹ ಘಡ” ಇದರ ಉದ್ಘಾಟನೆಯು
ನ. 30 ರಂದು ನಡೆಯಿತು.

ದೇವಸ್ಥಾನದ ಅರ್ಚಕರು ಪೂಜೆಯನ್ನು ನೆರವೇರಿಸಿದರು. ಅತಿಥಿಗಳು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ರಾಧಾಕೃಷ್ಣ ರೈ ಅಲೆಟ್ಟಿ, ಅಲೆಟ್ಟಿ ಸೊಸೈಟಿ ನಿರ್ದೇಶಕ ಸುಧಾಕರ ಅಲೆಟ್ಟಿ,ಯು. ಸಂಯುಕ್ತ ಮಂಡಳಿ ನಿರ್ದೇಶಕ ದಯಾನಂದ ಪಾತಿಕಲ್ಲು, ಸುಂದರ ಆಲೆಟ್ಟಿ, ಅಚ್ಚುತ ಮಣಿಯಣಿ ಅಲೆಟ್ಟಿ, ರಾಮಚಂದ್ರ ಆಲೆಟ್ಟಿ, ದೀಪಕ್ ಮೊರಂಗಲ್ಲು, ಜನನಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮೀಣ ಕ್ರೀಡೆ ಹಗ್ಗ ಜಗ್ಗಾಟದ ಸ್ಪರ್ಧೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿದ್ದು ಇದಕ್ಕೆ ಪೂರಕವಾಗಿ ತರಬೇತಿ ಮಾರ್ಗದರ್ಶನದ ಅವಶ್ಯಕತೆ ಇರುವುದರಿಂದ,ಅಂತಹ ಸ್ಪರ್ಧಿಗಳಿಗೆ ಅಭ್ಯಾಸ ಮಾಡಲು ಜಿಮ್ ಮಾದರಿಯ ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಂಡು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರ ಸದುಪಯೋಗವನ್ನು ಯುವಕರು, ಯುವತಿಯರು ಪಡೆದುಕೊಳ್ಳಲು ಮುಕ್ತ ಅವಕಾಶವಿದೆ. ಇದಕ್ಕೆ ಯಾವುದೇ ರೀತಿಯ ಶುಲ್ಕ ವಿರುವುದಿಲ್ಲ.ಉಚಿತವಾಗಿ ತರಬೇತಿ ವ್ಯವಸ್ಥೆ ನೀಡಲಾಗುವುದು ಎಂದು ಲತೀಶ್ ಗುಂಡ್ಯ ಪ್ರಾಸ್ತಾವಿಕವಾಗಿ ತಿಳಿಸಿದರು. ಸುರೇಶ ಅಲೆಟ್ಟಿ ಸ್ವಾಗತಿಸಿದರು. ಸುನಿಲ್ ಗುಂಡ್ಯ ವಂದಿಸಿದರು.

NO COMMENTS

error: Content is protected !!
Breaking