ಇಂಡಿಯನ್ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಭಾರತ ದೇಶದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 32 ತಂಡಗಳ 1ನೇ ಆವೃತ್ತಿಯ “ISCL-2025” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಬೆಂಗಳೂರಿನ ಕಿಣಿ ಕ್ರೀಡಾಂಗಣದಲ್ಲಿ ಡಿ.01ರಿಂದ ಡಿ.21ರ ವರೆಗೆ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಸುಕುಮಾರ್ ಕಂದ್ರಪ್ಪಾಡಿ ಇವರು ವೀಕ್ಷಕ ವಿವರಣೆಗಾರರಾಗಿ ಆಯ್ಕೆಯಾಗಿರುತ್ತಾರೆ.















ಈ ಪಂದ್ಯಾಟ ಡಿಡಿ ಸ್ಪೋರ್ಟ್ಸ್ ಮತ್ತು ರಾಜ್ ಮ್ಯೂಸಿಕ್ ಕನ್ನಡ ಚಾನೆಲ್ ನಲ್ಲಿ ನೇರ ಪ್ರಸಾರವಿದೆ. ಸುಳ್ಯ ತಾಲೂಕಿನಿಂದ ಅತಿ ವಿರಳವಾಗಿ ರಾಷ್ಟ್ರೀಯ ಕ್ರಿಕೆಟ್ ವೀಕ್ಷಕ ವಿವರಣೆ ಗಾರರ ಆಯ್ಕೆಯಾಗಿದ್ದರೂ ಸುಕುಮಾರ್ ಶ್ರೇಷ್ಠ ಸಾಧನೆ ಮೆರೆದಿದ್ದಾರೆ
ಕಳೆದ 14 ವರ್ಷಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇವರು ವೀಕ್ಷಕ ವಿವರಣೆ ನೀಡಿರುತ್ತಾರೆ. ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇವರು ಕಂದ್ರಪ್ಪಾಡಿ ಶ್ರೀ ಅಣ್ಣಪ್ಪ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರ.










