ಸುಳ್ಯ ಕೊಡಿಯಾಲಬೈಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಸೀತಾರಾಮ ನಾಯಕ್ ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ದೇವರಾಜ್ ಕುದ್ಪಾಜೆ ಆಯ್ಕೆಯಾಗಿದ್ದಾರೆ.















ಕೊಡಿಯಾಲಬೈಲ್ ಹಾಲು ಉತ್ಪಾದಕ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ಘೋಷಣೆಯಾಗಿ ಚುನಾವಣಾ ಪ್ರಕ್ರಿಯೆ ನಡೆದು ನ.23 ರಂದು ಚುನಾವಣೆ ಘೋಷಣೆಯಾಗಿತ್ತು. ಆದರೆ ಎಲ್ಲಾ ಸ್ಥಾನಗಳಿಗೂ ಒಂದೊಂದೇ ನಾಮ ಪತ್ರ ಬಂದಿದ್ದುದರಿಂದ ನಿರ್ದೇಶಕರ ಅವಿರೋಧ ಆಯ್ಕೆ ನಡೆಯಿತು. ಸಾಮಾನ್ಯ ಸ್ಥಾನದಿಂದ ಡಾ.ಎಂ.ಎಸ್.ಶಂಕರ ಭಟ್, ಎ.ವಿಷ್ಣು ಭಟ್, ವೇಣುಗೋಪಾಲ ಎ.ಎಸ್., ವೀರಪ್ಪ ಎಂ., ಯೋಗೀಶ ಶೆಟ್ಟಿ ಬಿ., ಕಮಲಾಕ್ಷ ಎಂ., ರವೀಂದ್ರನಾಥ ಶರ್ಮ, ಮಹಿಳಾ ಮೀಸಲು ಸ್ಥಾನದಿಂದ ವೇದಾವತಿ, ಮೀರಾ ರೈ, ಹಿಂದುಳಿದ ವರ್ಗ ಪ್ರವರ್ಗ ಎ ಯಿಂದ ಕೆ.ಸೀತಾರಾಮ ನಾಯಕ್, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ದೇವರಾಜ ಕುದ್ಪಾಜೆ ಆಯ್ಕೆ ಯಾಗಿದ್ದಾರೆ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಆ 2 ಸ್ಥಾನ ಖಾಲಿ ಇದೆ.
ನ.28 ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೆ.ಸೀತಾರಾಮ ನಾಯಕ್, ಉಪಾಧ್ಯಕ್ಷರಾಗಿ ದೇವರಾಜ್ ಕುದ್ಪಾಜೆ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿದ್ದ ಎಂ.ಶಿವಲಿಂಗಯ್ಯರ ಉಪಸ್ಥಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಘೋಷಣೆ ಮಾಡಿದರು.










