ಸುಳ್ಯ ನಗರ ಕಾಂಗ್ರೆಸ್ ಸಭೆ

0

ಸುಳ್ಯ ನಗರ ಕಾಂಗ್ರೆಸ್ ನ ವಾರ್ಡ್ ಸಮಿತಿಗಳ ಪುನರ್ ರಚನೆ ಮತ್ತು ವಾರ್ಡ್ ಉಸ್ತುವಾರಿಗಳ ನೇಮಕಾತಿ ಕುರಿತು ನಗರ ಕಾಂಗ್ರೆಸ್ ಸಮಿತಿ ಸಭೆಯನ್ನು ನ.30ರಂದು ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು.

ಸುಳ್ಯ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಶಶಿಧರ ಎಂ.ಜೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ವಾರ್ಡ್ ಸಂಘಟನೆಗಳ ಬಲವರ್ಧನೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುವ ಕುರಿತಾಗಿ ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಮುಂದೆ ಬರಲಿರುವ ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಕ್ಕೆ ತರಲು ಎಲ್ಲಾ ವಾರ್ಡ್ ನ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಆಂತರಿಕ ವೈಮನಸ್ಸು ತ್ಯಜಿಸಿ ಒಗ್ಗಟ್ಟಾಗುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಎಂ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ಅಂಬೆಕಲ್ಲು, ಸುಳ್ಯ ನಗರ ಪಂಚಾಯಿತಿ ಮಾಜಿ ಸದಸ್ಯ ಗೋಕುಲ್ ದಾಸ್, ಕಾಂಗ್ರೆಸ್ ನ ಹಿರಿಯ ಸದಸ್ಯ ಪಿ.ಎ ಮಹಮ್ಮದ್, ದ. ಕ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕಾರ್ಯದರ್ಶಿ, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರುಗಳಾದ ಭವಾನಿಶಂಕರ ಕಲ್ಮಡ್ಕ ಮತ್ತು ಶಿಲ್ಪಾ ಇಬ್ರಾಹಿಂ, ಜಿಲ್ಲಾ ಕೆಡಿಪಿ ಸದಸ್ಯೆ ಶ್ರೀಮತಿ ಸುಜಯಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ನಂದರಾಜ್ ಸಂಕೇಶ, ಇಂಟಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾಧ್ಯಕ್ಷ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸುಳ್ಯ ಬ್ಲಾಕ್ ಎಸ್.ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ನಗರ ಪಂಚಾಯತ್ ನ ನಿಕಟಪೂರ್ವ ಸದಸ್ಯರುಗಳಾದ ಶರೀಫ್ ಕಂಠಿ ಮತ್ತು ಡೇವಿಡ್ ಧೀರಾ ಕ್ರಾಸ್ತಾ, ಸುಳ್ಯ ನಗರ ಪಂಚಾಯತ್ ನಾಮನಿರ್ದೇಶನ ಸದಸ್ಯರುಗಳಾದ ಸಿದ್ದೀಕ್ ಕೊಕೊ, ರಾಜು ಪಂಡಿತ್ ಮತ್ತು ಭಾಸ್ಕರ್ ಪೂಜಾರಿ, ನಗರ ಪಂಚಾಯತ್ ನ ಮಾಜಿ ಸದಸ್ಯ ಶಿವಕುಮಾರ್ ಕಂದಡ್ಕ, ಪ್ರೇಮಾ ಟೀಚರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಶಹೀದ್ ಪಾರೆ ಮತ್ತು ಸುರೇಶ್ ಕಾಮತ್ ಜಯನಗರ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ರಕ್ಷಿತ್ ದೊಡ್ಡಡ್ಕ, ಮನ್ಸೂರ್ ಮೆಟ್ರೋ, ಮನೋಜ್ ತೊಡಿಕಾನ, ಬಿಡಿಓ ವಾರ್ಡ್ ಪ್ರಮುಖರಾದ ಜತ್ತಪ್ಪ ರೈ, ದುಗ್ಗಲಡ್ಕ ವಾರ್ಡ್ ಪ್ರಮುಖರಾದ ಹಸೈನಾರ್ ಮತ್ತು ಹುಸೈನಾರ್, ಹನೀಫ್ ಕೊಳಂಜಿಕೋಡಿ, ದುಗ್ಗಲಡ್ಕ ಬೂತ್ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕಂದಡ್ಕ, ಜಯನಗರ ವಾರ್ಡ್ ಪ್ರಮುಖರಾದ ಪಕ್ಕಿರೇಶ್ , ಹಳೆಗೇಟ್ ವಾರ್ಡ್ ಪ್ರಮುಖರಾದ ಸುರೇಶ್ ಹಳೆಗೇಟು ಮತ್ತು ಎಚ್.ಎ ಉಮ್ಮರ್, ಇಕ್ಬಾಲ್ ಸುಣ್ಣಮೂಲೆ, ಕೆ ಮಹಮ್ಮದ್, ಕಲ್ಲುಮುಟ್ಲು ಬೂತ್ ಅಧ್ಯಕ್ಷ ಕೆ ಎಲ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.