ನಿಡ್ವಾಳ-ಮೇಲ್ಪಾಡಿ ರಸ್ತೆ ಕಾಂಕ್ರೀಟ್ ಗೆ ಗುದ್ದಲಿ ಪೂಜೆ

0

ಶಾಸಕರ 50ಲಕ್ಷ ರೂ ಅನುದಾನದಲ್ಲಿ ಕಾಮಗಾರಿ

ಐವತ್ತೊಕ್ಲು ಗ್ರಾಮದ ನಿಡ್ವಾಳ-ಮೇಲ್ಪಾಡಿ ರಸ್ತೆಗೆ 50 ಲಕ್ಷ ರೂ ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು ಗುದ್ದಲಿ ಪೂಜೆ ಕಾರ್ಯಕ್ರಮ ಡಿ.3.ರಂದು ನಡೆಯಿತು.


ಶಾಸಕಿ ಕು.ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ಭಾಜಪ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಪಂಜ ಶಕ್ತಿ ಕೇಂದ್ರದ ಪ್ರಮುಖರಾದ ಲೋಕೇಶ್ ಬರೆಮೇಲು, ಬೆಳ್ಳಾರೆ ಮಹಾ ಶಕ್ತಿ ಕೇಂದ್ರದ ಪ್ರಮುಖರಾದ ಲಿಗೋಧರ ಆಚಾರ್ಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಶಿವರಾಮಯ್ಯ ಕರ್ಮಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಅನೂಪ್ ಬಿಳಿಮಲೆ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಪುರಿಯ, ಚಂದ್ರಶೇಖರ ದೇರಾಜೆ, ವೀಣಾ ಪಂಜ,ಐವತ್ತೊಕ್ಲು 1 ವಾರ್ಡ್ ಬೂತ್ ಸಮಿತಿ ಅಧ್ಯಕ್ಷ ದಯಾನಂದ ಮೇಲ್ಮನೆ, ಕಾರ್ಯದರ್ಶಿ ಪವನ್ ಅತ್ಯಡ್ಕ, ಊರವರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಶಾಲಪ್ಪ ಗೌಡ ಬರೆಮೇಲು ದೀಪ ಬೆಳಗಿಸಿದರು.ಸುರೇಶ್ ಅತ್ಯಡ್ಕ ಸ್ವಾಗತಿಸಿದರು. ದಯಾನಂದ ಮೇಲ್ಮನೆ ವಂದಿಸಿದರು.