ಡಿ. 9: ಉಬರಡ್ಕದಲ್ಲಿ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

0

ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು, ಮಾಸ್ ಲಿಮಿಟೆಡ್ ಇವರಿಂದ ಉಬರಡ್ಕ ಮಿತ್ತೂರು
ಪ್ರಾ.ಕೃ.ಪ.ಸ.ಸಂಘದ ಸಹಯೋಗದಲ್ಲಿ
ಸಹಕಾರ ರತ್ನ ಡಾ| ಎಂ .ಎನ್. ರಾಜೇಂದ್ರ ಕುಮಾರ್
ಇವರ ಸಹಕಾರದೊಂದಿಗೆ
ಅಡಿಕೆ ಖರೀದಿ ಕೇಂದ್ರದ
ಉದ್ಘಾಟನಾ ಸಮಾರಂಭ ಡಿ. 9ರಂದು ಸಂಘದ ಸಿರಿ ಸಹಕಾರಿ ಸೌಧದಲ್ಲಿ ಪೂರ್ವಾಹ್ನ ಗಂಟೆ 10:30ರಿಂದ ನಡೆಯಲಿದೆ.


ಸಮಾರಂಭದ ಉದ್ಘಾಟನೆಯನ್ನು ಮಾಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ರೋ. ಕೆ. ಸೀತಾರಾಮ ರೈ ಸವಣೂರು ನೆರವೇರಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ.‌ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಉಬರಡ್ಕಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರರಾದ ಜತ್ತಪ್ಪ ಗೌಡ, ಜೋಡು ದೈವಗಳ ದೈವಸ್ಥಾನ, ಮಿತ್ತೂರು ಇದರ ಅಧ್ಯಕ್ಷರಾದ ವೆಂಕಟ್ರಮಣ ಕೆದಂಬಾಡಿ, ಮತ್ತು ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ
ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕೃತ ಶ್ರೀ ವೆಂಕಟರಮಣ ಕ್ರೆಡಿಟ್ ಕೊ ಅಪರೇಟಿವ್‌ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ ಜಯರಾಮರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.


ಕಾರ್ಯಕ್ರಮದಲ್ಲಿ ಮಾಸ್ ಲಿ. ಉಪಾಧ್ಯಕ್ಷ ಪ್ರದೀಪ ಯಡಿಯಾಳ, ಉಬರಡ್ಕಮಿತ್ತೂರು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ಸಿಇಒ ಜಯಪ್ರಕಾಶ್. ಯು, ಮಾಸ್ ಲಿ. ಸಿಇಒ ಟಿ. ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ
ಕೆ. ಎಂ. ಲೋಕೇಶ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.