ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ 16 ನೇವರ್ಷದ ಅಯ್ಯಪ್ಪ ದೀಪೋತ್ಸವ

0

ನೂರಾರು ಅಯ್ಯಪ್ಪ ಸ್ವಾಮಿ ವೃತ ಧಾರಿಗಳಿಂದ ಭಕ್ತಿಯ ಅಪ್ಪ ಸೇವೆ, ಅಗ್ನಿ ಸೇವೆ

ಅರಂಬೂರು ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿಯ ಆಶ್ರಯದಲ್ಲಿ 16 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವವು ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ
ಡಿ ನಾರಾಯಣ ಗುರುಸ್ವಾಮಿ ದೊಡ್ಡೇರಿ ಮತ್ತು ಯಂ. ಈಶ್ವರ ಗುರುಸ್ವಾಮಿ ಮಜಿಗುಂಡಿ ಯವರ ನೇತೃತ್ವದಲ್ಲಿ ಡಿ. 6 ರಂದು ಜರುಗಿತು.

ಪೂರ್ವಾಹ್ನ ಪುರೋಹಿತ ಅಭಿರಾಮ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ದೀಪಾರಾಧನೆಗೊಂಡು ಉಷಾಪೂಜೆಯಾಗಿ ಮಧ್ಯಾಹ್ನ ಮಹಾಪೂಜೆ ನೆರವೇರಿದ ಬಳಿಕ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು.
ಸಂಜೆ ರಾಜ್ಯ ಹೆದ್ದಾರಿಯ ಗಣೇಶ್ ಇಂಡಸ್ಟ್ರಿಸ್ ಸರಳಿಕುಂಜದಿಂದ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಸ್ಥಾಪಿಸಿರುವ ಅಯ್ಯಪ್ಪ ಸನ್ನಿಧಾನಕ್ಕೆ ಚೆಂಡೆ ವಾದ್ಯ ಘೋಷಗಳೊಂದಿಗೆ ಬಾಲಕ ಬಾಲಕಿಯರ ದೀಪರಾಧನೆ ಯ ಬೆಳಕಿನೊಂದಿಗೆ ಸಿಡಿ ಮದ್ದಿನ ಪ್ರದರ್ಶನದೊಂದಿಗೆ ಗುರುಸ್ವಾಮಿಗಳ ನೇತೃತ್ವದಲ್ಲಿ ಪಾಲ್ ಕೊಂಬು ಮೆರವಣಿಗೆಯು ಸಾಗಿ ಬಂತು. ರಾತ್ರಿ ಮಂದಿರದಲ್ಲಿ ವಿಶೇಷವಾಗಿ ಸ್ಥಳೀಯ ಭಜಕರಿಂದ ನೃತ್ಯ ಭಜನೆ ಹಾಗೂ ಭಜನಾ ಸಂಕೀರ್ತನೆಯ ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಣೆ ಹಾಗೂ ರಾತ್ರಿ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯಿತು.
ರಾತ್ರಿ ಅಯ್ಯಪ್ಪ ವೃತಧಾರಿಗಳಿಂದ ಮೇಲೇರಿಗೆ ಅಗ್ನಿ ಸ್ಪರ್ಶ ವಾಗಿ ವಿಶೇಷವಾಗಿ ಅಪ್ಪ ಸೇವೆಯು ನಡೆಯಿತು. ಮರುದಿನ ಪ್ರಾತ: ಕಾಲದಲ್ಲಿ ಅಗ್ನಿಸೇವೆಯು ನಡೆಯಿತು.
ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ
ಮೂಲ್ಕಿ ಇವರಿಂದ ಬಂಗಾರ್ದ ಕುರಲ್ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು.

ಸಮಿತಿಯಗೌರವಾಧ್ಯಕ್ಷರಾದ ಕೃಷ್ಣ ಕಾಮತ್, ಅಧ್ಯಕ್ಷ ಈಶ್ವರ ಮೂಲ್ಯ ಮಜಿಗುಂಡಿ,ಕಾರ್ಯಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಕಾರ್ಯದರ್ಶಿ ಪುಷ್ಪರಾಜ್ ಮಜಿಗುಂಡಿ, ಕೋಶಾಧಿಕಾರಿ ನಾರಾಯಣ ಭಟ್ ಮಜಿಗುಂಡಿ,ಉಪಾಧ್ಯಕ್ಷರುಗಳಾದ ಕೃಷ್ಣ ಪ್ರಸಾದ್ ಬದಿಕಾನ, ಹೇಮಂತ್ ಕುಮಾರ್, ಜನಾರ್ದನ ಸಿರಿಕುರಲ್ ನಗರ,
ರತ್ನಾಕರ ರೈ ಅರಂಬೂರು, ಕಾರ್ಯದರ್ಶಿ ನಿವೃತ್ತ ಯೋಧ ನಾರಾಯಣ ನಾಯ್ಕ್, ಜಯಪ್ರಕಾಶ್ ಸ್ಥಾನದ ಮನೆ, ಖಜಾಂಜಿ ಜಗದೀಶ್ ಸರಳಿಕುಂಜ, ಉಪ ಕಾರ್ಯದರ್ಶಿ ದಾಸಪ್ಪ ಗೌಡ ಅರಂಬೂರು ಹಾಗೂ ಸಮಿತಿಯ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.