ಕುರುಂಜಿಭಾಗ್: ಟ್ಯಾಕ್ಸಲೆಂಟ್ ಇಂಡಿಯಾದ ನೂತನ ಶಾಖೆ ಆರಂಭ

0

ಸುಳ್ಯ ಕುರುಂಜಿಭಾಗ್ ಟೌನ್ ಕ್ಯೂಬ್ ಕೆಫೆ ಬಳಿ ಟ್ಯಾಕ್ಸಲೆಂಟ್ ಇಂಡಿಯಾ ಇದರ ನೂತನ ಶಾಖೆ ಆರಂಭಗೊಂಡಿದೆ.


ನೂತನ ಸಂಸ್ಥೆಯನ್ನು ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ ಬಿ ಸುಧಾಕರ್ ರೈ, ಹಾಗೂ ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆಎಂ ಮುಸ್ತಫ ರವರು ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಸಯ್ಯಿದ್ ಕುಂಚಿ ಕೋಯತಂಗಳ್ ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪಾಲುದಾರ ನೂರುದ್ದಿನ್ ಅಡ್ಕ ರವರು ‘ನಮ್ಮಲ್ಲಿ ಆದಾಯ ತೆರಿಗೆ ರಿಟರ್ನ್, ಜಿ ಎಸ್ ಟಿ ನೋಂದಣಿ ಮತ್ತು ರಿಟರ್ನ್ಸ್,ಯೋಜನಾ ವರದಿಗಳು ಮತ್ತು ಸಿ ಎಂ ಎ ವರದಿ,ಪ್ರಾವಿಡೆಂಟ್ ಫಂಡ್ (ಪಿ.ಎಫ್) ಎಸಿಕ್,ಡಿಜಿಟಲ್ ಸಹಿ ಪ್ರಮಾಣಪತ್ರ, ಟ್ರಸ್ಟ್‌ ಮತ್ತು ಸಹಕಾರ ಸಂಘಗಳ ಆಡಿಟ್,ಟಿ ಡಿ ಎಸ್ ರಿಟರ್ನ್ಸ್,ಉದ್ಯಮ ನೋಂದಣಿ,ಲೆಕ್ಕಪತ್ರ ನಿರ್ವಹಣೆ ಮತ್ತು ಖಾತೆಗಳು ಮುಂತಾದ ಕೆಲಸ ಕಾರ್ಯಗಳು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಅಲ್ಲದೆ ಟೀಮ್ ಟ್ಯಾಕ್ಸಲೆಂಟ್ ಇಂಡಿಯಾ ಇದರ
ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಕಾರ್ಯಚಡಿಸುತ್ತಿದ್ದು ಶಾಖೆ ಕಚೇರಿಗಳಾಗಿ ಪುತ್ತೂರು,ಉಪ್ಪಿನಂಗಡಿ,ದುಬೈ ಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲುದಾರರಾದ ನೌಫಾಲ್, ಸಿನಾನ್, ಝಿಯಾರ್, ಸ್ಥಳೀಯರಾದ ಎಸ್ ವೈ ಅಬ್ದುಲ್ ರಹಿಮಾನ್ ಪಟೇಲ್ ಮೊಬೈಲ್, ಅಬ್ಬಾಸ್ ಕೊಯಾಸ್, ಹಸ್ಸನ್ ಎಚ್ ಎಲ್ ಎಸ್ ಮೊದಲಾದವರು ಉಪಸ್ಥಿತರಿದ್ದರು.