ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿರುವ 2025-26 ನೇ ಸಾಲಿನ ರಾಜ್ಯ ಮಟ್ಟದ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಡಿಸೆಂಬರ್ 5 ರಂದು ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜು ಹಾಸನದಲ್ಲಿ ನಡೆಯಿತು.
















ಈ ಸ್ಪರ್ಧೆಯಲ್ಲಿ ಸುಳ್ಯದ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕು.ರಚಿತಾ ಮತ್ತು ಮೊಹಮ್ಮದ್ ಸೈಫ್ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದು, ರಾಜ್ಯ ಮಟ್ಟದಲ್ಲಿ ಚಾಂಪಿಯನ್ಸ್ ಗಳಾಗಿ ಮಿಂಚಿದ್ದಾರೆ.ಇವರನ್ನು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಂಗನಾಥ್.ಎಸ್ ಅವರು ತರಬೇತುಗೊಳಿಸಿದ್ದಾರೆ.



