ಕೇರ್ಪಡ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶ್ರಮದಾನ

0

ಶ್ರೀ ಮಹಿಷ ಮರ್ದಿನೀ ದೇವಸ್ಥಾನ ಇಲ್ಲಿ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಅಂಗವಾಗಿ ಶ್ರೀ ಕ್ಷೇತ್ರ ಒಳಾಂಗಣ ಹೊರಾಂಗಣದ ಕಸಕಡ್ಡಿ ತೆರವುಗೊಳಿಸಿ, ವಾಹನ ಪಾರ್ಕಿಂಗ್, ಭೋಜನ ಶಾಲೆ ಶುಚಿತ್ವಗೊಳಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಜೆ. ಲೋಕನಾಥ ರೈ ಪಟ್ಟೆ, ಸದಸ್ಯರು, ಕೂಡುಕಟ್ಟು ಸದಸ್ಯರು, ಸೇವಾ ಸಮಿತಿ ಸದಸ್ಯರು, ಭಕ್ತಾದಿಗಳು,
ಕಲಾ ಸಮಿತಿ ಸದಸ್ಯರು, ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.