ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ (ರಿ) ಕಡೆಪಾಲ ಇಲ್ಲಿ ಡಿಸೆಂಬರ್ 15ರ ಸಂಕ್ರಮಣದಂದು ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ಮತ್ತು ಸಾರ್ವಜನಿಕ ಅಗೆಲು ಸೇವೆ ನಡೆಯಲಿದೆ.















ಸಂಕ್ರಮಣ ದಿನದಂದು ಬೆಳಿಗ್ಗೆ ಗಂಟೆ 11ಕ್ಕೆ ಗಂಟೆಗೆ ಗುಳಿಗ ದೈವಕ್ಕೆ ಪಣಿವಾರ ಸೇವೆ, ಬೆಳಿಗ್ಗೆ ಗಂಟೆ 11.30ಕ್ಕೆ ಮೊಗೇರ್ಕಳ ದೈವಕ್ಕೆ ಮಂಜ ಸೇವೆ ನಡೆಯಲಿದೆ. ಬಳಿಕ ಸಂಜೆ ಗಂಟೆ 4ಕ್ಕೆ ಸ್ವಾಮಿ ಕೊರಗಜ್ಜ ದೈವಕ್ಕೆ ಎಣ್ಣೆ ಬೂಲ್ಯ ಕೊಟ್ಟು, ಸರಿಯಾಗಿ ಸಂಜೆ ಗಂಟೆ 6 ಕ್ಕೆ ಸ್ವಾಮಿ ಕೊರಗಜ್ಜ ದೈವದ ಕೋಲ ಆರಂಭಗೊಳ್ಳಲಿದೆ. ಬಳಿಕ ಕೋಲದಲ್ಲಿಯೇ ಸಾರ್ವಜನಿಕರ ಅಗೆಲು ಸೇವೆ ನಡೆಯಲಿದೆ. ರಾತ್ರಿ ಗಂಟೆ 9 ಕ್ಕೆ ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಾರ್ವಜನಿಕರು ಅಗೆಲು ಸೇವೆ ಮಾಡಿಸುವವರು ಇದ್ದಲ್ಲಿ ದೈವಸ್ಥಾನದ ಟ್ರಸ್ಟ್ ಗೆ ತಿಳಿಸಬಹುದು.



