
ಸುಳ್ಯ ತಾಲೂಕು ಯುವಶಕ್ತಿ ಪೈಂಟರ್ ಅಸೋಸಿಯೇಷನ್ ಇದರ ವಾರ್ಷಿಕ ಮಹಸಭೆ ಹಾಗೂ ನೂತನ ಸಮಿತಿ ರಚನಾ ಸಭೆ ಡಿಸೆಂಬರ್ 7ರಂದು ವಿಷ್ಣು ಸರ್ಕಲ್ ಗ್ಯಾರೇಜು ಮಾಲಕರ ಸಂಘದ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಯುವಶಕ್ತಿ ಪೈಂಟರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಕೆ ಎಲ್ ಜಗದೀಶ್ ವಹಿಸಿದ್ದರು.ಕಳೆದ ಸಾಲಿ ನ ಲೆಕ್ಕಪತ್ರ ಹಾಗೂ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ರವರು ಮಂಡಿಸಿದರು.















ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಗ್ಯಾರೇಜು ಮ್ಹಾಲಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಬೆಟ್ಟಂಪ್ಪಾಡಿ, ಸಮಿತಿಯ ಗೌರವಾಧ್ಯಕ್ಷ ವಸಂತ ರೈ ಮೂಡಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪೈಂಟರ್ ಗಳಾದ ರಾಮಚಂದ್ರ ಆರಂಬೂರು, ಮುತ್ತಣ್ಣ ಗೌಡ ಶಾಂತಿನಗರ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ನೂತನ ಸಾಲಿನ ಸಮಿತಿ ರಚಿಸಿ ಗೌರವ ಅಧ್ಯಕ್ಷರಾಗಿ ವಸಂತ ರೈ ಮೂಡೆಕಲ್ಲು, ಅಧ್ಯಕ್ಷರಾಗಿ ಜಗದೀಶ್ ಕೆ ಎಲ್ ಕಾಯರ್ತೋಡಿ, ಉಪಾಧ್ಯಕ್ಷರುಗಳಾಗಿ ಕಬೀರ್ ಅಹಮದ್ ಗಾಂಧಿನಗರ, ಉಸ್ಮಾನ್ ಜಯನಗರ, ಗುರುಪ್ರಸಾದ್ ಬೆಂಡೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ಕೆಎನ್, ಜೊತೆ ಕಾರ್ಯದರ್ಶಿಗಳಾಗಿ ನವೀನ ಬೆಳ್ಳಾರೆ, ಹೇಮಂತ್ ಕಲ್ಲುಗುಂಡಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಬೇರ್ಪಡ್ಕ, ಕ್ರೀಡಾ ಸಂಚಾಲಕ ಆಸಿಫ್ ಜಯನಗರ, ಹಿಮಾಕ್ಷ ಪರಮಂಡಲ, ಜೀವನ್ ಕುರುಂಜಿಗುಡ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಲಕ್ಷ್ಮಿಕಾಂತ ಮೂಲೆ ಮಜಲು, ಲೋಹಿತಾಶ್ವ ಪರಮಂಡಲ, ನಿರ್ದೇಶಕರುಗಳಾಗಿ ಹರೀಶ್ ಭಂಡಾರಿ ಬೆಳ್ಳಾರೆ, ಪ್ರವೀಣ ಎಲಿಮಲೆ, ಮಹೇಂದ್ರ ಬಸ್ಮಡ್ಕ, ಗಿರೀಶ್ ಪೆರಾಜೆ, ಅನಿಲ್ ರಾಜ್ ಕಾಯರ್ತೊಡಿ, ಗೋಪಿನಾಥ್ ಕಲ್ಲುಗುಂಡಿ, ರಾಕೇಶ್ ಅಡ್ಕಾರು, ಜಿತೇಶ್ ಗೂನಡ್ಕ, ರವೀಂದ್ರ ಶಾಂತಿನಗರ, ಸೀತಾರಾಮ ಅರಂತೋಡು, ಗಂಗಾಧರ ಭರ್ಜರಿ ಗುಂಡಿ, ಹಾಗೂ ಗೌರವ ಸಲಹೆಗಾರರಾಗಿ ರಾಮಚಂದ್ರ ಅರಂಬೂರು, ಮುತ್ತಣ್ಣ ಗೌಡ ಶಾಂತಿನಗರ ಆಯ್ಕೆಯಾದರು.
ಕಬೀರ್ ಅಹ್ಮದ್ ಗಾಂಧಿನಗರ ಸ್ವಾಗತಿಸಿ ಪದ್ಮನಾಭ ಶೆಟ್ಟಿ ವಂದಿಸಿದರು











