Home Uncategorized ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ...

ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ

0

ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರಿಂದ ಕಾರ್ಯಕ್ರಮ ಉದ್ಘಾಟನೆ

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮರಾಟಿ ಧಾರ್ಮಿಕ ಚಿಂತನಾ ಸಮಿತಿ ಇದರ ವತಿಯಿಂದ ರಚನೆಗೊಂಡ ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ವಾರ್ಷಿಕೋತ್ಸವ ಡಿ.7ರಂದು ಅಂಬೆಟಡ್ಕದ ಗಿರಿದರ್ಶನಿ ಸಭಾಭವನದಲ್ಲಿ ನಡೆಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ್ ಸಮಾರಂಭವನ್ನು ಉದ್ಘಾಟಿಸಿ
ಮಾತನಾಡಿ’ಮರಾಟಿ ಸಮುದಾಯದ ಆಚಾರ ವಿಚಾರ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಳ್ಳುವುದರ ಜೊತೆಗೆ ಆಚಾರ, ವಿಚಾರ‌‌ ಸಂಪ್ರದಾಯಗಳ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಪುತ್ತೂರು ಶ್ರೀ ಮಹಮ್ಮಾಯಿ ಸೌಹಾರ್ದ ಸ.ಸಂಘದ ಅಧ್ಯಕ್ಷ ಕೆ.ಶೀನ ನಾಯ್ಕ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ಗೊಂಧೋಳು ಪೂಜೆ ಸಂಪ್ರದಾಯಕೆ ಚ್ಯುತಿ ಬಾರದ ರೀತಿಯಲ್ಲಿ ಆಚರಣೆ ಮಾಡಬೇಕು. ಸಂಪ್ರದಾಯಗಳಿಗೆ ಆಧುನಿಕ ಸ್ಪರ್ಶ ಬೇಡ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುರೇಶ್ ಎಂ., ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಭಾಗವಹಿಸಿದ್ದರು. ಪುಸ್ತಕದ ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾದ ಗೋಪಾಲ ನಾಯ್ಕ್ ದೊಡ್ಡೇರಿ, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ.ಕೆ.ಸುಂದರ ನಾಯ್ಕ್, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ ಹೊನ್ನೇಡಿ, ಕೊಡಗು ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ನಾಯ್ಕ, ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಪೆರ್ಣೆ, ಪುತ್ತೂರು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಪಾಂಗಲಾಯಿ, ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಇದರ ಅಧ್ಯಕ್ಷ ಕೆ.ಈಶ್ವರ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು.


ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ಅಧ್ಯಕ್ಷತೆ ವಹಿಸಿದ್ದರು.
ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ‌ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಧಾ‌ರ್ಮಿಕ ಚಿಂತನಾ ಸಮಿತಿ(ಸಂಪಾದಕ‌ ಮಂಡಳಿ)ಯ ಗೌರವ ಸಂಪಾದಕ ಜನಾರ್ಧನ ಬಿ.ಕುರುಂಜಿಭಾಗ್ ಉಪಸಂಪಾದಕರಾದ ಭವಾನಿಶಂಕರ‌ ಕಲ್ಮಡ್ಕ, ಧರ್ಮಣ್ಣ ನಾಯ್ಕ ಗರಡಿ, ಸೀತಾನಂದ ಬೇರ್ಪಡ್ಕ, ಸದಸ್ಯರಾದ ಜಿ.ಬುದ್ಧ ನಾಯ್ಕ್, ಜನಾರ್ದನ ನಾಯ್ಕ್ ಕೇರ್ಪಳ, ನಾರಾಯಣ ನಾಯ್ಕ ಬೀರಮಂಗಲ,ಈಶ್ವರ ವಾರಣಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪಾದಕ ಮಂಡಳಿಯ
ಉಪಸಂಪಾದಕ ಭವಾನಿಶಂಕರ‌ ಕಲ್ಮಡ್ಕ ಸ್ವಾಗತಿಸಿ,ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ‌ ಕಾರ್ಯದರ್ಶಿ ರಮೇಶ್ ನೀರಬಿದಿರೆ ವಂದಿಸಿದರು. ಸುಜಾತ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.


ಗೋಂದೋಳು ಪೂಜೆ ಪುಸ್ತಕ:


ಮರಾಟಿ ಸಮುದಾಯದ ಕುಟುಂಬಗಳಲ್ಲಿ ನಡೆದುಕೊಂಡು ಬರುತ್ತಿರುವ ಪ್ರಮುಖ ಆರಾಧನೆಯಾಗಿರುವ ಶ್ರೀ ಮಹಮ್ಮಾಯಿ ದೇವಿಯ ಗೋಂದೋಳು ಪೂಜೆ ಸಹಿತ, ಮದುವೆ, ಇನ್ನಿತರ ಆಚಾರ ವಿಚಾರಗಳು ಏಕರೂಪದಲ್ಲಿರಬೇಕೆಂಬ ಕಾರಣಕ್ಕೆ ರಚಿತವಾಗಿರುವ ಗೋಂದೋಳು ಪೂಜೆಯ ಹಿನ್ನೆಲೆ, ಆಚರಣೆಯ ವಿಧಿವಿಧಾನಗಳು ಮತ್ತು ಇತರ ಪ್ರಮುಖ ಆಚರಣೆಗಳು ಪುಸ್ತಕ ದಲ್ಲಿದೆ.

ಕಳೆದ ಮೂರು ವರ್ಷಗಳ ಹಿಂದೆ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಮರಾಟಿ ಧಾರ್ಮಿಕ ಚಿಂತನಾ ಸಮಿತಿಯನ್ನು ರಚಿಸಿಕೊಂಡು ಈ ಪುಸ್ತಕ ರಚಿಸಲ್ಪಟ್ಟಿದೆ.ಇದರ ಅಧ್ಯಕ್ಷರಾದ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲ ನಾಯ್ಕ ದೊಡ್ಡೇರಿಯವರ ಸಂಪಾದಕತ್ವದಲ್ಲಿ 12 ಮಂದಿ ಸದಸ್ಯರನ್ನು ಒಳಗೊಂಡ ಸಂಪಾದಕೀಯ ಮಂಡಳಿ ರಚಿಸಿಕೊಂಡು ಮಾಹಿತಿ ಕಳೆಹಾಕಲಾಗಿದೆ. ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಕಾಸರಗೋಡು ಮೊದಲಾದ ಕಡೆ ಗೋಂದೋಳು ಪೂಜೆ ಮಾಡುವ ಪೂಜಾರಿಗಳನ್ನು, ಸಮಾಜದ ಹಿರಿಯರನ್ನು ಸಂದರ್ಶಿಸಿ ,ಮಾಹಿತಿ ಕ್ರೋಢೀಕರಿಸಿ ಪುಸ್ತಕ ರಚಿಸಲಾಗಿದೆ ಎಂದು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ಹಾಗೂ ಪುಸ್ತಕದ ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾದ ಗೋಪಾಲ ನಾಯ್ಕ್ ದೊಡ್ಡೇರಿ ತಮ್ಮ ಭಾಷಣದಲ್ಲಿ ಹೇಳಿದರು.

ಬಳಿಕ ಸಮಾಜ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

NO COMMENTS

error: Content is protected !!
Breaking