
ಸುಳ್ಯ ನಗರ ಪಂಚಾಯತ್‌ನಲ್ಲಿ ೩೭ ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದ್ವಿತೀಯ ದರ್ಜೆ ಸಹಾಯಕರಾಗಿ ನಿವೃತ್ತರಾದ ಶಶಿಕಲಾ ಶಂಕರ ಮಯ್ಯ ಅವರಿಗೆ ಸಾರ್ವಜನಿಕ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಂಗಣದಲ್ಲಿ ಡಿ.೭ರಂದು ನಡೆಯಿತು.
ಶಶಿಕಲಾ ಶಂಕರ ಮಯ್ಯ ಅಭಿನಂದನಾ ಬಳಗದ ವತಿಯಿಂದ ನಡೆದ ಸಮಾರಂಭವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉದ್ಘಾಟಿಸಿ ಶುಭ ಹಾರೈಸಿದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿದರೆ ಅಧ್ಯಕ್ಷತೆ ವಹಿಸಿದ್ದರು.















ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್‌ನ ಹಿಂದಿನ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಹಿರಿಯರಾದ ಕೃಷ್ಣ ನಾವಡ,ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್,ಮೊಗರ್ಪಣೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕೆ.ಎಂ,ಎಸ್ , ಸಿಸ್ಟರ್ ಮೇರಿ ಸ್ಟೆಲ್ಲಾ, ಶಶಿಕಲಾ ಶಂಕರ ಮಯ್ಯ ಅವರ ಪುತ್ರ ಕವನ್, ಪುತ್ರಿ ಕಾವ್ಯ, ಅಳಿಯ ಮುರಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳಾದ ರೆ.ಪಾ.ಅಲ್ವಿನ್ ಡಿಕುನ್ಹಾ, ಕಸ್ತೂರಿ ಮಧುಸೂದನ ಕುಂಭಕ್ಕೋಡು, ಲತಾ ಮಧುಸೂಧನ, ಬಾಲಗೋಪಾಲ ಸೇರ್ಕಜೆ, ರಾಕೇಶ್ ಕುಂಟಿಕಾನ, ನ.ಪಂ ಸದಸ್ಯರಾದ ಕೆ.ಎಸ್.ಉಮ್ಮರ್, ಸುಧಾಕರ ಕೇರ್ಪಳ, ಶೀಲಾ ಅರುಣ ಕುರುಂಜಿ, ಸುಶೀಲಾ ಜಿನ್ನಪ್ಪ,ರಿಯಾಜ್ ಕಟ್ಟೆಕ್ಕಾರ್, ಆದಂ ಹಾಜಿ ಕಮ್ಮಾಡಿ, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ಶರೀಫ್ , ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ,ಪ್ರೆಶ್ ಕ್ಲಬ್ ಗೌರವಧ್ಯಕ್ಷ ಹರೀಶ್ ಬಂಟ್ವಾಳ್,ಸದಸ್ಯರಾದ ಕೃಷ್ಣ ಬೆಟ್ಟ,ಗಂಗಾಧರ ಕಲ್ಲಪಳ್ಳಿ,ಇಬ್ರಾಹಿಂ ಶಿಲ್ಪ, ಹಸನ್ ಕೆರ್ಪಳ, ಎಂ ಎನ್ ಭಟ್,ನ.ಪಂ.ಮಾಜಿ ಮುಖ್ಯಾಧಿಕಾರಿ ಚಂದ್ರಕುಮಾರ್ ಸೇರಿದಂತೆ ಅನೇಕರ ಗಣ್ಯರು ಉಪಸ್ಥಿತರಿದ್ದರು.
ಶಶಿಕಲಾ ಶಂಕರ ಮಯ್ಯ ಅವರು ಅಭಿನಂದನೆ ಹಾಗೂ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀಮತಿ ಆರತಿ ಪ್ರಾರ್ಥನೆ ಮಾಡಿದರು.
ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸ್ವಾಗತಿಸಿ ನ.ಪಂ ಸದಸ್ಯ ಶರೀಫ್ ಕಂಠಿ ಕಾರ್ಯಕ್ರಮ ನಿರೂಪಿಸಿದರು.










