Home Uncategorized ವಿದ್ಯಾರ್ಥಿಗಳಿಗೊಂದು ಶುಭ ಸುದ್ದಿ – ಉಚಿತ ಡಿ.ಸಿ.ಎ. ಕೋರ್ಸ್ ಗೆ ಅರ್ಜಿ ಆಹ್ವಾನ

ವಿದ್ಯಾರ್ಥಿಗಳಿಗೊಂದು ಶುಭ ಸುದ್ದಿ – ಉಚಿತ ಡಿ.ಸಿ.ಎ. ಕೋರ್ಸ್ ಗೆ ಅರ್ಜಿ ಆಹ್ವಾನ

0

ಸುಳ್ಯದ ವಿದ್ಯಾಮಾತಾ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೋರ್ಸು

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ಉಚಿತ DCA (Diploma in Computer Application) ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದ್ದು ಪ್ರಸ್ತುತ ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ದಿನನಿತ್ಯ ಅಥವಾ ಭಾನುವಾರದ ತರಗತಿಗಳನ್ನು ನಡೆಸಲಾಗುವುದು. ಕಡ್ಡಾಯವಾಗಿ ಈ ಉಚಿತ ತರಗತಿ ಸದ್ಯ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ತರಬೇತಿ ಅವಧಿ ಮೂರು ತಿಂಗಳು.

ಆಸಕ್ತರು ಸುಳ್ಯ ರಥ ಬೀದಿಯ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್ (SCDCC ಬ್ಯಾಂಕ್ ಹತ್ತಿರ) ನಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಶಾಖೆಗೆ ಭೇಟಿಕೊಟ್ಟು ತಮ್ಮ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಆಧಾರ್ ಪ್ರತಿ, ರೇಷನ್ ಕಾರ್ಡ್ ಪ್ರತಿ ಹಾಗೂ ತಾವು ಅಧ್ಯಯನ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ವ್ಯಾಸಂಗ ಪ್ರಮಾಣ ಪತ್ರ (ಸ್ಟಡಿ ಸರ್ಟಿಫಿಕೇಟ್) ನೀಡಿ ತಮ್ಮ ಹೆಸರನ್ನು 20/12/2025ರೊಳಗಾಗಿ ನೋಂದಾಯಿಸಿಕೊಳ್ಳುವುದು. ಪ್ರಥಮವಾಗಿ ನೋಂದಾಯಿಸಿದ 50 ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9448527606 / 9620468869 ಸಂಪರ್ಕಿಸಬಹುದು.

NO COMMENTS

error: Content is protected !!
Breaking