ಸುಬ್ರಹ್ಮಣ್ಯ: ಅನಧಿಕೃತ ಅಂಗಡಿಗಳ ತೆರವಿಗೆ ಸೂಚನೆ

0

ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ರಾಜಕಾರಣಿ ಮೂಲಕ ಒತ್ತಡ

ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿರುವ ದೇವಸ್ಥಾನದ ಅಂಗಡಿ ಮುಂಗಟ್ಟುಗಳಲ್ಲಿ ಅವದಿ ಮೀರಿ ಕಾರ್ಯನಿರ್ವಹಿಸುತಿದ್ದ ಅಂಗಡಿಗಳ ತೆರವಿಗೆ ಇಂದು ದೇವಸ್ಥಾನದ ಅಧಿಕಾರಿಗಳು ಹೋಗಿ ತಿಳಿಸಿದ್ದು ಈ ವೇಳೆ ವಿಚಾರಣೆಗೆ ಹೋದ ಅಧಿಕಾರಿಗಳ ಮೇಲೆ ಒತ್ತಡ ತರಲು ಪ್ರಯತ್ನಿಸಿರುವುದಾಗಿ ತಿಳಿದು ಬಂದಿದೆ.

ಆದಿ ಸುಬ್ರಹ್ಮಣ್ಯದಲ್ಲಿ ಕಾರ್ಯ ನಿರ್ವಹಿಸುತಿದ್ದ ಅಂಗಡಿಗಳು 12 ತಿಂಗಳ ಅವಧಿಗೆ ನೀಡುತ್ತಿದ್ದ ಅಂಗಡಿಗಳಾಗಿದ್ದು ಇದರಲ್ಲಿ ಕೆಲವು ಅಂಗಡಿಗಳು ಅವಧಿ ಮೀರಿದ್ದವೆನ್ಬಲಾಗಿದೆ. ಆದರವರು ಅಂಗಡಿಯೂ ಖಾಲಿ ಮಾಡದೆ ಫುಟ್ಪಾತ್ ಅತಿಕ್ರಮಣ ಮಾಡಿ ವ್ಯಾಪಾರ ನಡೆಸುತ್ತಿದ್ದರೆನ್ನಾಲಾಗಿದೆ. ಇದರ ಬಗ್ಗೆ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್ ದೇವಳದ ಸಿಬ್ಬಂದಿಗಳಾದ ಮಹೇಶ್ ಮತ್ತಿತರರು ತೆರಳಿ ಅಂಗಡಿ ತೆರವುಗೊಳಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಅಂಗಡಿ ಮಾಲಿಕರೊಬ್ಬರು ರಾಜಕಾರಣಿಗಳ ಮೂಲಕ ಪೋನ್ ಮಾಡಿಸಿ ಒತ್ತಡ ತರಲು ಯತ್ನಿಸಿರುವುದಾಗಿ ತಿಳಿದು ಬಂದಿದೆ.