ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ತುಂಬಿರುವ ಸಂದರ್ಭವನ್ನು ಆಚರಿಸುವ ಬಗ್ಗೆ ಶಾಸಕರ ಸೂಚನೆಯ ಮೇರೆಗೆ ಏರ್ಪಡಿಸಿರುವ ಪೂರ್ವಭಾವಿ ಸಭೆ ಇಂದು ಸಂಜೆ 3.30 ಕ್ಕೆ ಸುಳ್ಯ ತಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.















ತಾಲೂಕು ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳಲ್ಲದೆ, ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿ, ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಅಡ್ಹಾಕ್ ಸಮಿತಿ ಕಾರ್ಯಾಧ್ಯಕ್ಷ ಎಸ್.ಎನ್.ಮನ್ಮಥರವರು ವಿನಂತಿಸಿಕೊಂಡಿದ್ದಾರೆ.










