ಸ್ಥಗಿತಗೊಳಿಸಿದ ಬಸ್ ಆರಂಭ ಹಾಗೂ ಹೊಸ ಬಸ್ ಗೆ ಮನವಿ















ಕೆಎಸ್ಸಾರ್ಟಿಸಿ ಪುತ್ತೂರಿನಿಂದ ಸವಣೂರು ಮೂಲಕ ಬೆಳ್ಳಾರೆ ಗೆ ಬರುತ್ತಿದ್ದ 2 ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದು ಮತ್ತೆ ಆರಂಭಿಸುವಂತೆ, ಬೆಳ್ಳಾರೆಯಿಂದ ಮಾಡಾವು ಮೂಲಕ ಪುತ್ತೂರಿಗೆ ಬೆಳಿಗ್ಗೆ ಗಂಟೆ 6.00 ಕ್ಕೆ ಸಾರಿಗೆ ಬಸ್ ಆರಂಭಿಸುವಂತೆ, ಪುತ್ತೂರು ನಿಲ್ದಾಣ ದಿಂದ ರಾತ್ರಿ 8.00 ಗಂಟೆಗೆ ಹೊರಟು ಮಾಡಾವು – ಬೆಳ್ಳಾರೆ -ಸುಬ್ರಮಣ್ಯ ಮೂಲಕ ಬೆಂಗಳೂರಿಗೆ ಹಾಗೂ ಮಡಿಕೇರಿಯಿಂದ ಸುಳ್ಯ -ಬೆಳ್ಳಾರೆ -ಸವಣೂರು -ಆಲಂಕಾರು ಮೂಲಕ ಧರ್ಮಸ್ಥಳ ಕ್ಕೆ ಬಸ್ಸಿನ ವ್ಯವಸ್ಥೆ ಒದಗಿಸುವಂತೆ ಮತ್ತು ಬೆಳ್ಳಾರೆ ಟಿ ಸಿ ಕೆಂದ್ರದಲ್ಲಿ ಬೆಳಿಗ್ಗೆ ಯಿಂದ ಸಂಜೆ ತನಕ ಅಧಿಕಾರಿ ಕರ್ತವ್ಯ ನಿರ್ವಹಣೆ ಮಾಡಲು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ದಕ್ಷಿಣ ಕನ್ನಡ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ನೇತೃತ್ವದಲ್ಲಿ ಬೆಳ್ಳಾರೆ ಕಾಂಗ್ರೆಸ್ ನಾಯಕರಾದ ಅನಿಲ್ ರೈ ಚಾವಡಿಬಾಗಿಲು, ಓವಿನ್ ಪಿಂಟೋ ಮನವಿ ಮಾಡಿದ್ದಾರೆ. ಮನವಿಗೆ ಸಚಿವರು ಸ್ಪಂದನೆ ನೀಡಿದ್ದು ಶೀಘ್ರ ದಲ್ಲೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.










