Home ಪ್ರಚಲಿತ ಸುದ್ದಿ ಉಬರಡ್ಕದಲ್ಲಿ ಮಾಸ್ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಉಬರಡ್ಕದಲ್ಲಿ ಮಾಸ್ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

0

ಮಂಗಳೂರು ಕೃಷಿಕರ ಸಹಕಾರ ಸಂಘ (ಮಾಸ್) ಇದರ ವತಿಯಿಂದ ಉಬರಡ್ಕ ಮಿತ್ತೂರು ಸಹಕಾರ ಸಂಘದ ಕಟ್ಟಡದಲ್ಲಿ ಅಡಿಕೆ‌ ಖರೀದಿ ಕೇಂದ್ರ ಉದ್ಘಾಟನೆಗೊಂಡಿದೆ. ಮಾಸ್ ಅಧ್ಯಕ್ಷರಾಗಿರುವ ಹಿರಿಯ ಸಹಕಾರಿ ಸವಣೂರು ಸೀತಾರಾಮ ರೈಯವರು ನೂತನ ಸಂಸ್ಥೆಯನ್ನು ದೀಪ ಬೆಳಗಿ ಉದ್ಘಾಟಿಸಿದರೆ, ಮಾಸ್ ಸಂಸ್ಥೆಯ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿಯವರು ಅಡಿಕೆ ಕತ್ತರಿಸಿ ನೂತನ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಬರಡ್ಕ ಮಿತ್ತೂರು ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಉಬರಡ್ಕ ನರಸಿಂಹ ಶಾಸ್ತಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ, ಉಬರಡ್ಕ‌ಮಿತ್ತೂರು ಮಿತ್ತೂರು ಜೋಡುದೈವಗಳ ದೇವಸ್ಥಾನದ ಮೊಕ್ತೇಸರ ವೆಂಕಟ್ರಮಣ ಗೌಡ ಕೆದಂಬಾಡಿ, ಸುಳ್ಯ‌ಎ.ಪಿ.ಎಂ.ಸಿ. ಕಾರ್ಯದರ್ಶಿ ರವೀಂದ್ರ, ಉಬರಡ್ಕ‌ಮಿತ್ತೂರು ಸಹಕಾರ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ಡಿ.ಸಿ.ಸಿ. ಬ್ಯಾಂಕ್ ವಲಯ ಮೇಲ್ವಿಚಾರಕ ರತನ್ ಕೆ.ಎಸ್., ಉಬರಡ್ಕ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವೇದಿಕೆಯಲ್ಲಿ ಇದ್ದರು.

ಸನ್ಮಾನ : 2025 ನೇ ಸಾಲಿನ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಹಕಾರಿ ಪಿ.ಸಿ.ಜಯರಾಮ್ ರನ್ನು ಮಾಸ್ ಲಿಮಿಟೆಡ್ ವತಿಯಿಂದ ಸನ್ಮಾನಿಸಿದರೆ, ಉಬರಡ್ಕ ಸಹಕಾರ ಸಂಘದಿಂದ ಹಿರಿಯ ಸಹಕಾರಿಗಳಾದ ಸವಣೂರು ಸೀತಾರಾಮ ರೈ, ನಿತ್ಯಾನಂದ ಮುಂಡೋಡಿ ಹಾಗೂ ಸಹಕಾರ ರತ್ನ ಪಿ.ಸಿ.ಜಯರಾಮರನ್ನು ಸನ್ಮಾನಿಸಲಾಯಿತು.

ಕು.ದೀಕ್ಷಿತಾ ಪ್ರಾರ್ಥಿಸಿದರು. ಮಂಗಳೂರು ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್ ಸ್ವಾಗತಿಸಿದರು. ಉಬರಡ್ಕ ಮಿತ್ತೂರು ಸಹಕಾರ ಸಂಘದ ನಿರ್ದೇಶಕ ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರ್ವಹಿಸಿದರು.

NO COMMENTS

error: Content is protected !!
Breaking