Home ಪ್ರಚಲಿತ ಸುದ್ದಿ ಬಾಳುಗೋಡು : ಗ್ರಾಹಕ ಸೇವಾಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಬಾಳುಗೋಡು : ಗ್ರಾಹಕ ಸೇವಾಕೇಂದ್ರದ ಉದ್ಘಾಟನಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಬಾಳುಗೋಡು ಗ್ರಾಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಪ್ರತಿನಿಧಿಯ ಗ್ರಾಹಕ ಸೇವಾಕೇಂದ್ರವನ್ನು ಸುಬ್ರಹ್ಮಣ್ಯ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯ ಅಧ್ಯಕ್ಷರಾದ ತೀರ್ಥರಾಮ ದೋನಿಪಳ್ಳರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಬಾಳುಗೋಡು ಸೇವಾಕೇಂದ್ರ ಕಟ್ಟಡದ ಮಾಲಕರಾದ ಲೋಕೇಶ್ ಕಟ್ಟೆಮನೆ, ಬಾಳುಗೋಡು ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ತಳೂರು, ಕೊತ್ತನಡ್ಕ ಒಕ್ಕೂಟದ ಅಧ್ಯಕ್ಷರಾದ ತೀರ್ಥರಾಮ ಕೆ, ಸುವಿಧಾ ಸಹಾಯಕರಾದ ಕುಸುಮ, ಒಕ್ಕೂಟಗಳ ಪದಾಧಿಕಾರಿಗಳು, ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿ, ಬಾಳುಗೋಡು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿರವರಾದ ಶ್ರೀಮತಿ ದೀಕ್ಷಾರವರು ಧನ್ಯವಾದವಿತ್ತರು.

NO COMMENTS

error: Content is protected !!
Breaking