Home ಪ್ರಚಲಿತ ಸುದ್ದಿ ಕೆವಿಜಿ ಆಯುರ್ವೇದ ಶಿಕ್ಷಣ ಸಂಸ್ಥೆಗೆ ಎ ಎಲ್ ಎನ್ ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಕಾಲೇಜು...

ಕೆವಿಜಿ ಆಯುರ್ವೇದ ಶಿಕ್ಷಣ ಸಂಸ್ಥೆಗೆ ಎ ಎಲ್ ಎನ್ ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಕಾಲೇಜು ಕೊಪ್ಪ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಅಧ್ಯಾಯನಕ್ಕಾಗಿ ಭೇಟಿ

0

ಪ್ರಾಯೋಗಿಕ ಕಲಿಕೆಯನ್ನು ಹೆಚ್ಚಿಸುವ ಸಲುವಾಗಿ ಕೊಪ್ಪದಿಂದ ಎಲ್ ಎನ್ ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನ್ಯಾಷನಲ್ ಕೌನ್ಸಿಲ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (NCISM) ನ ಮಾನದಂಡಗಳ ಅಧಿಸೂಚನೆಯಂತೆ ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಿ ದಿನಾಂಕ 25/11/2025 ರಂದು ಕೆವಿಜಿ ಆಯುರ್ವೇದ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು. 41 ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರಾದ ಡಾ. ಪ್ರವೀಣ್ ಕುಮಾರ್ ಮತ್ತು ಡಾ. ಶ್ರದ್ಧಾ ಜಿ ಎಸ್ ಇವರೊಂದಿಗೆ ಕೆವಿಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ಮಾಡಿರುತ್ತಾರೆ.

ಡಾ. ಪುರುಷೋತ್ತಮ ಕೆ ಜಿ, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗ, ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಕೆವಿಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಮತ್ತು ಸಂಶೋಧನಾ ಕೇಂದ್ರ, ಸುಳ್ಯ ಇವರು ಔಷಧ ತಯಾರಿಕಾ ಘಟಕದ ಸ್ಥಾಪನೆ ಮತ್ತು ಅದರ ಸಂಕ್ಷಿಪ್ತ ಇತಿಹಾಸದ ಪರಿಚಯವನ್ನು ಕೊಟ್ಟು ವಿದ್ಯಾರ್ಥಿಗಳನ್ನು ಶುಭ ಹಾರೈಸಿದರು.

ಸಹಾಯಕ ಪ್ರಾಧ್ಯಾಪಕರಾದ ಡಾ . ಪಾವನ ಕೆ. ಬಿ ಹಾಗೂ ಡಾಕ್ಟರ್ ಗೋಪಾಲಕೃಷ್ಣ ನಾಯಕ್ ಇವರು ಕೆವಿಜಿ ಆಯುರ್ವೇದ ಔಷಧ ತಯಾರಿಕಾ ಘಟಕದ ಉತ್ಪನ್ನಗಳು, ತಯಾರಿಸುವ ವಿಧಾನ, ಔಷಧ ಉತ್ಪನ್ನಗಳ ಗುಣಮಟ್ಟ, ಜಿಎಂಪಿ ಮಾರ್ಗಸೂಚಿಗಳು ಹಾಗೂ ಕಾರ್ಯನಿರ್ವಹಣೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಔಷದ ತಯಾರಿಕೆ ಕ್ಷೇತ್ರದಲ್ಲಿ ಅನುಭವವನ್ನು ಪಡೆಯಲು ಈ ಭೇಟಿಯು ಅವಕಾಶ ಮಾಡಿಕೊಟ್ಟಿತ್ತು. ಡಾ. ಹರ್ಷಿತಾ ಎಂ, ಪ್ರಾಧ್ಯಾಪಕರು,ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈಗಾಗಲೇ ಮುನಿಯಾಲ್ ಆಯುರ್ವೇದ ವೈದ್ಯಕೀಯ ಕಾಲೇಜು, ಮಣಿಪಾಲ, ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜು, ದಾವಣಗೆರೆ, ಕೆ. ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು , ಬೆಳಗಾವಿ ಮುಂತಾದ ಹಲವು ಆಯುರ್ವೇದ ವಿದ್ಯಾ ಸಂಸ್ಥೆಗಳಿಂದ ಆಯುರ್ವೇದ ವಿದ್ಯಾರ್ಥಿಗಳು ಭೇಟಿ ನೀಡಿರುತ್ತಾರೆ.

NO COMMENTS

error: Content is protected !!
Breaking