
ಕರ್ನಾಟಕ ಆಗೋ ಕೆಮಿಕಲ್ಸ್ (ಮಲ್ಟಿಪ್ಲೆಕ್ಸ್) ಬೆಂಗಳೂರು ಮತ್ತು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಪಂಜ, ಕರಾವಳಿ ಎಂಟರ್‌ಪ್ರೆಸಸ್ ಸುಳ್ಯ
ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ ಡಿ.9 ರಂದು ಪಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
















ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಗತಿ ಪರ ಕೃಷಿಕ ಶಿವರಾಯ್ಯ ಕರ್ಮಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಆಗೋ ಕೆಮಿಕಲ್ಸ್, ಬೆಂಗಳೂರು ಇದರ ಮಾರುಕಟ್ಟೆ ಮತ್ತು ತಾಂತ್ರಿಕ ಮುಖ್ಯಸ್ಥರಾದ ಡಾ| ಎಂ. ನಾರಾಯಣ ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಶಿವಮೊಗ್ಗ ಬ್ರಾಂಚ್ ಕೆ. ವಿ.ಪಿ, ಎ.ಎನ್.ಎಂ. ಎ ಎನ್ ಕೃಷ್ಣಮೂರ್ತಿ, ಸುಳ್ಯ ಕರಾವಳಿ ಎಂಟರ್ ಪ್ರೈಸಸ್ ನ ಚೆನ್ನಪ್ಪ ಕುಕ್ಕುಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ ಸ್ವಾಗತಿಸಿದರು. ನಿರ್ದೇಶಕ ವಾಚಣ್ಣ ಕೆರೆಮೂಲೆ ನಿರೂಪಿಸಿದರು. ಸಿಬ್ಬಂದಿ ಸುದೀಪ್ ರೈ ವಂದಿಸಿದರು.










