














ಕೂತ್ಕುಂಜ ಗ್ರಾಮದ ನಾಗತೀರ್ಥ ದಿ. ಚನಿಯ ರವರ ಪತ್ನಿ ಶ್ರೀಮತಿ ಚೋಮು ರವರು ಹೃದಯಾಘಾತದಿಂದ ಡಿ.09 ರಂದು ನಿಧನರಾದರು. ಅವರಿಗೆ 85 ವರುಷ ವಯಸ್ಸಾಗಿತ್ತು. ಡಿ08ರಂದು ರಾತ್ರಿ ಅವರು ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿ ಆಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪುತ್ರ ಗಂಗಾಧರ, ಪುತ್ರಿಯರಾದ ಶ್ರೀಮತಿ ಶೀಲಾವತಿ, ಶ್ರೀಮತಿ ಮೋಹಿನಿ, ಸಹೋದರ ಶೇಷಪ್ಪ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.










