ಜಯನಗರ: ಅನಾರೋಗ್ಯ ಪೀಡಿತ ಚಂದ್ರಶೇಖರ್ ರವರ ಮನೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರು ಭೇಟಿ

0

ಜಯನಗರ: ಬೆನ್ನುಮೂಳೆಯ ಸಮಸ್ಯೆಯಿಂದ ಹಾಸಿಗೆ ಹಿಡಿದಿರುವ ಚಂದ್ರಶೇಖರ ರವರ ಮತ್ತು ಅವರು ವಾಸಿಸುವ ಮನೆಯ ದುರವಸ್ತೆಯ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಬಂದಿರುವ ವರದಿಗೆ ಸ್ಪಂದಿಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕದ ಸಭಾಪತಿ ಪಿ ಬಿ ಸುಧಾಕರ್ ರೈ ಹಾಗೂ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಕೊಡಂಕೇರಿ ರವರು ಡಿ.9 ರಂದು ಚಂದ್ರಶೇಖರ್ ರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಹಾಗೂ ಮನೆಯ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮನೆ ದುರಸ್ತಿಕರಣಕ್ಕೆ ಯೋಜನೆ ರೂಪಿಸುವ ಬಗ್ಗೆ ಭರವಸೆಯ ಮಾತನ್ನು ನೀಡಿದ್ದಾರೆ.

ಅದೇ ರೀತಿ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷರಾಗಿರುವ ನಗರ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ಕೊಡಕೇರಿ ರವರು ಕೂಡ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಪಂದಿಸುವ ಭರವಸೆಯನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಪತ್ರಕರ್ತ ಹಸೈನಾರ್ ಜಯನಗರ, ಸ್ಥಳೀಯ ನಿವಾಸಿ ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.