
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನಕ್ಷತ್ರವಾದ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರದಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಧಿಕ ಸಂಖ್ಯೆ ಭಕ್ತರು ಜಮಾವಣೆಗೊಳ್ಳುತಿದ್ದು ಇಂದು ಕೂಡ ಭಾರಿ ಸಂಖ್ಯೆಯ ಭಕ್ತರು ಆಗಮಿಸಿದ್ದರು.
















ಬೆಳಗ್ಗೆ 6:00 ರಿಂದ ಆರಂಭವಾದ ಆಶ್ಲೇಷ ಬಲಿ ಸೇವೆಯು ನಿರಂತರವಾಗಿ ಮೂರು ಹಂತಗಳಲ್ಲಿ 11 ಗಂಟೆ ತನಕ ಭಕ್ತರು ಸೇವೆಗಾಗಿ ಸರತಿ ಸಾಲಿನಲ್ಲಿ ಇದ್ದದು ಕಂಡು ಬಂತು. ಇತ್ತ ನಾಗ ಪ್ರತಿಷ್ಠಾ ಮಂಟಪದ ಎದುರುಗಡೆ ನಾಗ ಪ್ರತಿಷ್ಠೆ ಸೇವೆ ಗೈವ ಭಕ್ತರು ಅಂಗಣದ ಉದ್ದಕ್ಕೂ ಕುಳಿತಿದ್ದರು.

ಮಧ್ಯಾಹ್ನ ಮಹಾಪೂಜೆ ಸಂದರ್ಭ ಭಕ್ತರ ದರ್ಶನ ಸ್ಥಗಿತಗೊಂಡಾಗ ಮತ್ತಷ್ಟು ಭಕ್ತರು ಹೊರಾಂಗಣದಲ್ಲಿ ಜಮಾವಣೆಗೊಂಡಿದ್ದರು.










