ಪೊಲೀಸರೊಂದಿಗೆ ಹತ್ತು ದಿನ ಸಂಚಾರ ಜಾಗೃತಿ ಮೂಡಿಸುವ ಕೆಲಸ
ಕೆಲವು ತಿಂಗಳ ಹಿಂದೆ ಮಾಣಿ – ಮೈಸೂರು ಹೆದ್ದಾರಿಯ ಅರಂತೋಡು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಮತ್ತು ದೇಹವನ್ನು ಹೊರಹಾಕಿ ಕುಳಿತು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದ ಆರೋಪಿಗಳಲ್ಲೊಬ್ಬನಿಗೆ ಸುಳ್ಯ ನ್ಯಾಯಾಲಯ ಸಮುದಾಯ ಶಿಕ್ಷೆ ಆದೇಶ ನೀಡಿದೆ.
ಯುವಕರ ಹುಚ್ಚಾಟದ ಈ ದೃಶ್ಯವನ್ನು ಸ್ಥಳೀಯರೋ ರ್ವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಯುವಕರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.















ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ದ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ ಪಿ ರವರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ನ್ಯಾಯಾಲಯಕ್ಕೆ ಹಾಜರಾದ ಆರೋಪಿ (5) ಸಾಜಿಬ್ ಎಂಬಾತನಿಗೆ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯ 5000 ರೂ. ದಂಡ ಮತ್ತು ಹತ್ತು ದಿನಗಳ ಕಾಲ ಸಮುದಾಯ ಸೇವೆ ಶಿಕ್ಷೆ ಯನ್ನು ನೀಡಿ ಆದೇಶ ಮಾಡಿದ್ದಾರೆ.
ಸಮುದಾಯ ಸೇವೆ ಶಿಕ್ಷೆ ಅಡಿಯಲ್ಲಿ ಸಾಜಿಬ್ ಡಿ.9 ರಿಂದ ಡಿ. 18 ರವರೆಗೆ ಸುಳ್ಯ ಠಾಣೆಯ ಸಿಬ್ಬಂದಿಯೊಂದಿಗೆ ಸುಳ್ಯ ಪೇಟೆಯ ಮುಖ್ಯ ಜಂಕ್ಷನ್ ನಲ್ಲಿ ನಿಂತು ಸಂಚಾರ ನಿಯಮಗಳನ್ನು ಹೊಂದಿರುವ ಫಲಕಗಳನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಹಾಗೂ ಸಂಚಾರ ನಿಯಂತ್ರಣ ಮಾಡಲು ಸಹಕರಿಸಬೇಕು ಎಂದು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ ಮೋಹನ್ ಬಾಬು ರವರು ಆದೇಶ ನೀಡಿದ್ದಾರೆ.










