ಜ್ಞಾನ ವಿಕಾಸ ಸಮನ್ವಯಾಧಿಕಾರಿಯಾಗಿ ಯಶ್ವಿನಿ ಮೋಹನ್ ಕುಮಾರ್

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಜಿಲ್ಲಾ ಕಚೇರಿಯಲ್ಲಿ ಹಿರಿಯ ಉದ್ಯೋಗಿಯಾಗಿದ್ದ ಶ್ರೀಮತಿ ಯಶ್ವಿನಿ ಮೋಹನ್ ಕುಮಾರ್ ಅವರಿಗೆ ಜ್ಞಾನ ವಿಕಾಸ ಸಮನ್ವಯಾಧಿಕಾರಿಯಾಗಿ ಭಡ್ತಿಯಾಗಿದ್ದು, ಹೊಳೆನರಸೀಪುರಕ್ಕೆ ವರ್ಗಾವಣೆಯಾಗಿದೆ.

ಪಂಜಿಕಲ್ಲು ಮುದಿಯಾರು ಮುದ್ದಪ್ಪ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿಯಾದ ಯಶ್ವಿನಿಯವರು ಗೂನಡ್ಕ ಪೆರುಂಗೋಡಿಯ ಮೋಹನ್ ಕುಮಾರ್ ಪಿ. ಅವರ ಪತ್ನಿ. 9 ವರ್ಷಗಳ ಕಾಲ ಎಸ್.ಕೆ.ಆರ್.ಡಿ.ಪಿ. ಸುಳ್ಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು.