















ಡಿ. 9ರಂದು ಜಿಲ್ಲಾ ಕಾಂಗ್ರೆಸ್ ಭವನ ಮಲ್ಲಿಕಟ್ಟೆಯಲ್ಲಿ ಜಿಲ್ಲಾ ಅಸಂಘಟಿತ ಘಟಕದ ಅಧ್ಯಕ್ಷರಾದ ಅಬ್ಬಾಸ್ ಅಲಿ ಅವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ಘಟಕದ ಮಾಸಿಕ ಸಭೆ ನಡೆಯಿತು. ಸುಳ್ಯ ತಾಲೂಕು ಅಸಂಘಟಿತ ಅಧ್ಯಕ್ಷರಾದ ದಿ. ಎ ಎಸ್ ಚಂದ್ರಲಿಂಗಂ ರವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ರವರ ಶಿಪಾರಸ್ಸಿನ ಮೇರೆಗೆ ಮಂಜುನಾಥ ಕಂದಡ್ಕರವರನ್ನು ನೇಮಕಗೊಳಿಸಿ ಆದೇಶ ಮಾಡಿರುತ್ತಾರೆ.

ಈ ಸಭೆಗೆ ಜಿಲ್ಲಾ ಅಸಂಘಟಿತ ಪ್ರಧಾನ ಕಾರ್ಯದರ್ಶಿಯಾದ ಜ್ಞಾನಶೀಲನ್ ಕಲ್ಲುಗುಂಡಿ ಕೆಪಿಸಿಸಿ ಕಾರ್ಮಿಕ ವಿಭಾಗ ಜಂಟಿ ಕಾರ್ಯದರ್ಶಿಯವರಾದ ಸುರೇಶ್ ಕುಮಾರ್, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯರು ಹಾಗೂ ಕರ್ನಾಟಕ ಪ್ಲಾಂಟೇಶನ್ ಅಂಡ್ ಇಂಡಸ್ಟ್ರಿಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷರಾದ ಶಿವಕುಮಾರ್ ಕಂದಡ್ಕ, ತೋಟತೊಳಿಲಾಲರ್ ಸಂಘದ ಪ್ರಧಾನ ಕಾರ್ಯದರ್ಶಿ ಸರವಣನ್ ಆರ್ ಬೇಂಗಮಲೆ, ತೋಟ ತೊಳಿಲಾಲರ್ ಸಂಘದ ಉಪಾಧ್ಯಕ್ಷರಾದ ಅರುಣಾಚಲಂ ಕೂಟೇಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ತಾಲೂಕು ಆಸ್ಪತ್ರೆ ಸುಳ್ಯ ಚಂದ್ರನ್ ವಿ ಕೂಟೇಲ್, ಸುಳ್ಯ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ಸುಳ್ಯ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಪ್ರೇಮ ಹರೀಶ್ವರನ್ ಸಭೆಯಲ್ಲಿ ಉಪಸ್ಥಿತದ್ದರು.



