HomePage_Banner
HomePage_Banner
HomePage_Banner
HomePage_Banner

ಕಸ್ತೂರಿ ರಂಗನ್ ವರದಿ : ಜ.21ರಂದು ಜಿಲ್ಲೆಗೆ ಸಂಪುಟ ಉಪಸಮಿತಿ

ಡಾ| ಕಸ್ತೂರಿರಂಗನ್ ವರದಿಯ ಶಿಫಾರಸುಗಳ ಬಗ್ಗೆ ಪರಿಶೀಲಿಸಿ ಜನರ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಅರಣ್ಯ ಸಚಿವ ಬಿ.ರಮಾನಾಥ ರೈಯ ವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿಯು ಜ.21ರಂದು ಮಂಗಳೂರಿಗೆ ಭೇಟಿ ನೀಡಲಿದೆ. ಈ ಉಪಸಮಿತಿಯಲ್ಲಿ ರಮಾನಾಥ ರೈ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಯವರಿದ್ದಾರೆ.
ಸಂಪುಟ ಉಪಸಮಿತಿ ಭೇಟಿ ನೀಡಲಿರುವ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿನ ಪರಿಸರ ಸೂಕ್ಷ್ಮ ಪ್ರದೇ ಶಗಳ ಸಾಧಕ ಬಾಧಕಗಳ ಬಗ್ಗೆ ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾ ಯತ್ ಸದಸ್ಯರು, ತಾಲೂಕು ಪಂಚಾ ಯತ್ ಅಧ್ಯಕ್ಷರುಗಳು, ಸದಸ್ಯರುಗಳು, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತ್‌ಗಳ ಅಧ್ಯ ಕ್ಷರುಗಳು ಸದಸ್ಯರುಗಳು, ಪರಿಸರ ಸಂರಕ್ಷಣೆಯ ಕಾಳಜಿಯುಳ್ಳ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಪತ್ರಕರ್ತ ರುಗಳನ್ನು ಆಹ್ವಾನಿಸಲು ನಿರ್ಧರಿ ಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಪುಟ ಉಪಸಮಿತಿ ಪ್ರತೀ ಗ್ರಾಮಕ್ಕೆ ಅಥವಾ ಹೋಬಳಿಗೆ ಹೋಗಿ ಜನರ ಅಹವಾಲುಗಳನ್ನು ಖುದ್ದಾಗಿ ಆಲಿಸಿ, ಅಭಿಪ್ರಾಯಗಳನ್ನು ಕ್ರೋಢೀ ಕರಿಸಿ ಸರಕಾರಕ್ಕೆ ವರದಿಕೊಡ ಬೇಕೆಂದು ಜನರು ಅಭಿಪ್ರಾಯ ಪಡು ತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.