HomePage_Banner
HomePage_Banner
HomePage_Banner

ಅಪ್ಪ ಅಂದರೆ ಆಕಾಶ…

ಅಪ್ಪ ಅಪ್ಪಾ ನನಗೆ ನೀನು ಬೇಕಪ್ಪಾ. ಎಂಬ ಹಾಡು ಮಕ್ಕಳ ಪಾಲಿನ ಆನಂದ ಭರವಸೆಗಳ ಆಶಾದೀಪವೆಂದರೆ ಅದು ಅಪ್ಪನೇ. . ಅದರಲ್ಲಿಯೂ ಮಗಳನ್ನು ತನ್ನ ಅಮ್ಮನೆಂದೆ ಪರಿಗಣಿಸಿ ಮುದ್ದಿಸಿ, ಲಾಲಿಸುವ ಅಪ್ಪನ ಪ್ರೀತಿಗೆ ಸರಿಸಾಟಿಯಿಲ್ಲ.
ಅದರಲ್ಲಿಯೂ ನಾನು ಅಂತೂ ಅಪ್ಪನ ಪ್ರೀತಿಯ ಒಬ್ಬಳೇ ಮಗಳು, ನನ್ನ ಅಪ್ಪ ಅಂತೂ ತುಂಬಾ ಸೌಮ್ಯ ಸ್ವಭಾವದವರು,ತುಂಬಾ ಸೈಲೆಂಟ್. ಎಲ್ಲರು ನನ್ನ ಅಪ್ಪನನ್ನು ಇಷ್ಟಪಡುತ್ತಾರೆ. ನಾನು ಚಿಕ್ಕವಳಿದ್ದಾಗ ನನಗೆ ಅಪ್ಪನ ಪಂಚೆ ಹೊದಿಯದೆ ನಿದ್ದೆ ಬರುತ್ತಿರಲಿಲ್ಲವಂತೆ. ಅದಕ್ಕಾಗಿ ಅಳುವ ಸೀನ್ ಕೂಡ ಇತ್ತು. ಅಮ್ಮ ಈಗ ಕೂಡ ಹೇಳಿಕೊಂಡು ನಗುತ್ತಾ ಇರುತ್ತಾರೆ.
ನನ್ನ ವಿದ್ಯಾಭ್ಯಾಸಕ್ಕೆ ಅಪ್ಪನ ಹಾರೈಕೆ ಅಂತೂ ಸದಾ ಇರುತ್ತದೆ. ಎಲ್ಲರ ಪ್ರೀತಿಗೆ ಪಾತ್ರರಾದ ನನ್ನ ಅಪ್ಪನಿಗೆ ನನ್ನ ಮಗಳು ಕಲಿತು ಉದ್ಯೋಗಕ್ಕೆ ಹೋಗಬೇಕು ಎಂಬುದು ಒಂದು ಕನಸು. ಹಾಸ್ಟೆಲ್‌ನಲ್ಲಿ ಇರುವ ನಾನು ಅಪ್ಪನೊಂದಿಗೆ ಅರ್ಧಗಂಟೆ ಆದರೂ ಮಾತನಾಡುತ್ತೇನೆ. ಹಾಗೆಯೇ ನನಗೆ ಹಣಬೇಕಾದರೆ ಎಷ್ಟೇ ಕಷ್ಟವಾದರೂ ನನಗೆ ತಲುಪಿಸುತ್ತಾರೆ. ಅರ್ಥ ನನ್ನ ಮಗಳು ಚೆನ್ನಾಗಿರಲಿ ಎಂಬುದು.
ತಿಳಿಯದ ಸಮಯದಲ್ಲಿ ನಾನು ಹಲವಾರು ತಪ್ಪುಗಳನ್ನು ಮಾಡಿದರೂ ಅದನ್ನು ತಿದ್ದಿ ಚೆನ್ನಾಗಿ ಬುದ್ಧಿಹೇಳಿ ಕೊಟ್ಟಿದ್ದಾನೆ. ಹೊಸ ಡ್ರೆಸ್,ಪಾಕೆಟ್ ಮನಿ ಅಂತ ನನಗಾಗಿ ಖರ್ಚುಗಳನ್ನು ಮಾಡುತ್ತಾರೆ.
ಹೀಗೆಯೇ ನನ್ನ ಸ್ನೇಹಿತರು ನನ್ನ ಅಪ್ಪನನ್ನು ಹಾಸ್ಟೇಲ್‌ನಲ್ಲಿ ಮಿನಿ ದರ್ಶನ್ ಎಂದು ಕರೆಯುತ್ತಾರೆ.ಯಾಕೆಂದರೆ ನನ್ನ ಗೆಳತಿಯರಲ್ಲಿ ನಾನು ಹೇಳುವುದು ಇದೆ. ನನ್ನ ಅಪ್ಪ ಯುವಕನಾಗಿದ್ದಾಗ ದರ್ಶನ್ ತರ ಇದ್ರೂ ಅಂತ. ಅದಕ್ಕಾಗಿ ಅವರು ಹಾಸ್ಟೇಲ್‌ಗೆ ಬಂದರೆ ಮಾಜಿ ದರ್ಶನ್ ಬರುತ್ತಾರೆ ಎಂದು ಹೇಳುತ್ತಾರೆ. ಹಾಗೆಯೇ ಹಾಸ್ಟೆಲ್‌ನಲ್ಲಿ ಎಲ್ಲರಿಗೂ ನನ್ನ ಅಪ್ಪ ಅಂದ್ರೆ ತುಂಬಾ ಇಷ್ಟ.
ಇಷ್ಟು ಪ್ರೀತಿ ತೋರಿಸಿದ ನನ್ನ ಅಪ್ಪನಿಗೆ ನಾನು ಚಿರಋಣಿ, ಅಲ್ಲದೆ ಎಷ್ಟೇ ಉನ್ನತ ಉದ್ಯೋಗಕ್ಕೆ ಹೋದರು ನನ್ನ ಮಾಜಿ ದರ್ಶನ್‌ನನ್ನು ಯಾವತ್ತಿಗೂ ಮರೆಯಲಾರೆ..
– ಪೂಜಾಶ್ರೀ ಕೆ ಪೈಚಾರ್, ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು ಪುತ್ತೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.