ಆಕಸ್ಮಿಕ

Advt_Headding_Middle
Advt_Headding_Middle
Advt_Headding_Middle

ಭವ್ಯ, ನಿನ್ನ ಆ ಕೈಯ ಬಿಗಿಯಲ್ಲಿ
ಬಿಗಿದಿಟ್ಟ ಭಾವಗಳು ಅದೆಷ್ಟೋ!
ಅತ್ತೆ, ಮಾವ, ಪತಿ, ಮಗು ಇರುವರೆಂದೇ ತಿಳಿದು
ಇದ್ದರೂ-ಯಾಕೆ ಬರಲಿಲ್ಲ ನನ್ನ ನೋಡಲೆಂದು,
ಆಸೆ-ಆತಂಕ, ಭಯ, ಹತಾಶೆ, ದುಃಖಗಳ
ಹೊಯ್ಲಲ್ಲಿ ಯಾರಾದರೂ ಹೇಳಿ ಸತ್ಯ ಎಂಬಂತೆ
ಕಣ್ಣೀರಿನ ಕಣ್ಣ ಸಂಧಿಯಲ್ಲಿ ಕೇಳಿದ ಪ್ರಶ್ನೆಗಳಿಗೆ
ಉತ್ತರಿಸಲಾಗದೆ ಸರಕ್ಕನೆ ಹಿಂದೆ ಬಂದೆ
ಎಲ್ಲರನ್ನೂ ಕಳಕೊಳ್ಳುವ ವಿಧಿ ನಿನ್ನದಾಗಿತ್ತೇ?
ಆಕಸ್ಮಿಕದ ದುರ್ಘಟನೆಯಲ್ಲಿ ನೀ ಮಾತ್ರ ಉಳಿದುದು
ನಿನ್ನ ತಪ್ಪೇ – ನಿನ್ನ ಸಂಚಿತ ಪಾಪವೇ?
ಅಯ್ಯೋ, ಮುಗ್ದೆಯೊಬ್ಬಳ ಬದುಕು ಹೀಗಾಗಬೇಕಿತ್ತೇ?
ಆದರೆ, ಪಾಪ! ನಿನಗೂ ತಿಳಿದಿಲ್ಲ ಯಾರು ಏನಾಗಿದ್ದಾರೆಂದು?
ಅಷ್ಟು ಚಂದದ ಬದುಕು ನೀರಿನ ಮೇಲಿನ ಗುಳ್ಳೆಯೋ
ಕಾಯುವ ಕೈಯೇ ಕಿತ್ತುಕೊಂಡಿತೇ ನಿನ್ನ ಭಾಗ್ಯ
ಗೆಳತೀ ಬದುಕೊಂದು ರಣರಂಗ | ಎಂದರಿತು
ನಿನಗೂ ಒಂದು ಬದುಕಿದೆ-ನಿನ್ನಂಥ
ನಿರ್ಭಾಗ್ಯರು ಇದ್ದಾರೆ ಎಷ್ಟೋ ಜನ |
ಸತ್ತು ಬದುಕುವ ಭವದ ಹೋರಾಟ
ಬದುಕಿ ಸಾಯದಿರು ತಂಗಿ-
ಎಣ್ಣೆಯಾಗು, ಬತ್ತಿಯಾಗು, ಹಣತೆಯಾಗು
ಆತ್ಮಬಲದ ಬೆಳೆಸಿಕೊಂಡು ನೀ ಜ್ಯೋತಿಯಾಗು,
ನೊಂದವರಿಗೆ ನೀನೊಂದು ಬೆಳಗಾಗು,
ಕಷ್ಟಗಳ ಮೆಟ್ಟಿನಿಂತು ನೀನಾಗು ದಿವ್ಯದ ಬೆಳಕು.

ಸುಸ್ಮಿತಾ ಸಂತೋಷ್ ಜಾಕೆ
(ಕಲ್ಲುಗುಂಡಿ ರಸ್ತೆ ದುರಂತದಲ್ಲಿ ಬದುಕುಳಿದ
ಭವ್ಯ ಅವಿನಾಶ್ ಅವರನ್ನು ನೆನೆದು)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.