ತಾಲೂಕಿನ 12 ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ

Advt_Headding_Middle
Advt_Headding_Middle

ಸುಳ್ಯ ತಾಲೂಕಿನ ಒಂದು ಸರಕಾರಿ ಶಾಲೆ ಹಾಗೂ 11 ಖಾಸಗಿ ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ.
ಸರಕಾರಿ ಶಾಲೆಗಳ ಪೈಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಂಜ, ಅನುದಾನ ರಹಿತ ಶಾಲೆಗಳ ಪೈಕಿ ರೋಟರಿ ಆಂಗ್ಲಮಾಧ್ಯಮ ಶಾಲೆ ಸುಳ್ಯ, ಸತ್ಯಸಾಯಿ ಚೊಕ್ಕಾಡಿ, ಕುಮಾರಸ್ವಾಮಿ ಸುಬ್ರಹ್ಮಣ್ಯ, ಸ್ನೇಹ ಪ್ರೌಢಶಾಲೆ ಸುಳ್ಯ, ಸವೇರಪುರ ಆಂಗ್ಲಮಾಧ್ಯಮ ಪ್ರೌಢಶಾಲೆ ಕಲ್ಲುಗುಂಡಿ, ಸಂತ ಜೋಸೆಫರ ಆಂಗ್ಲಮಾಧ್ಯಮ ಪ್ರೌಢಶಾಲೆ ಬೀರಮಂಗಲ, ಕೆ.ಎಸ್.ಜಿ. ಆಂಗ್ಲಮಾಧ್ಯಮ ಪ್ರೌಢಶಾಲೆ ಪಂಜ, ಬ್ಲೆಸ್ಡ್ ಕುರಿಯಕೋಸ್ ಗುತ್ತಿಗಾರು. ಕೆ.ಎಸ್.ಗೌಡ ಎಜ್ಯುಕೇಶನ್ ಟ್ರಸ್ಟ್ ನಿಂತಿಕಲ್ಲು, ಜ್ಞಾನದೀಪ ಎಲಿಮಲೆ, ತೆಕ್ಕಿಲ್ ಪ್ರೌಢಶಾಲೆ ಗೂನಡ್ಕ ಶೇ.100 ಫಲಿತಾಂಶ ದಾಖಲಿಸಿದೆ.

ಎಸ್.ಎಸ್.ಎಲ್.ಸಿ ಫಲಿತಾಂಶ: ಸುಬ್ರಹ್ಮಣ್ಯ ಕುಮಾರಸ್ವಾಮಿಗೆ ಶೇ.100

2015 ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಎ+, 9 ವಿದ್ಯಾರ್ಥಿಗಳು ಎ, 23 ವಿದ್ಯಾರ್ಥಿಗಳು ಬಿ+, 12 ವಿದ್ಯಾರ್ಥಿಗಳು ಬಿ, 5 ವಿದ್ಯಾರ್ಥಿಗಳು ಸಿ+ ಗ್ರೇಡ್‌ನಲ್ಲಿ ತೇರ್ಗಡೆ ಹೊಂದಿದ್ದು ಶೇ.100 ಫಲಿತಾಂಶ ಬಂದಿದೆ.
ಮಧುಶ್ರೀ ಬಿ.ಎಸ್. 602, ಆಶ್ರಿತಾ ಪಿ.ಹೆಚ್. 597, ನಿಹಾರಿಕಾ ಕೆ.ಪಿ. 596, ಸ್ಪೂರ್ತಿ ಬಿ.ಜಿ. 586, ಶಮಾ ಕೆ.ಎಸ್. 582, ಮಹಿಮಾ ಕಾಮತ್ 576, ಮೌನ ಬಿ.ಕೆ. 574, ಸಿಂಚನಾ ಎ. 568, ಉಜ್ವಲ್ ಕೆ. 567 ಅಂಕ ಗಳಿಸಿಕೊಂಡಿದ್ದಾರೆ.

kumaraswamykumaraswamya

ಗೂನಡ್ಕ ತೆಕ್ಕಿಲ್ ಪ್ರೌಢಶಾಲೆಗೆ ಶೇ.100 ಫಲಿತಾಂಶ
ತೆಕ್ಕಿಲ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ನಡೆಸುತ್ತಿರುವ ತೆಕ್ಕಿಲ್ ಮಾದರಿ ಆಂಗ್ಲ ಪ್ರೌಢಶಾಲೆ ಗೂನಡ್ಕಕ್ಕೆ ಶೇ.100 ಫಲಿತಾಂಶ ಬಂದಿದೆ. ಪ್ರಥಮ ಬಾರಿ ಎಸ್.ಎಸ್.ಎಲ್.ಸಿ. ಯ 16 ವಿದ್ಯಾರ್ಥಿಗಳ ಪೈಕಿ 13 ಮಂದಿ ಪ್ರಥಮ ದರ್ಜೆ, 3ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ಗ್ರಾಮೀಣ ಪ್ರದೇಶವಾದ ಗೂನಡ್ಕದಲ್ಲಿ ಆಂಗ್ಲ ಮಾಧ್ಯಮ ತೆಕ್ಕಿಲ್ ಮಾದರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಕಾರಣ ಕರ್ತರಾದ ತೆಕ್ಕಿಲ್ ಮಾದರಿ ಶಾಲೆಯ ಪ್ರಾಂಶುಪಾಲರಾದ ದಾಮೋದರ್, ಹೈಸ್ಕೂಲ್‌ನ ಮುಖ್ಯೋಪಧ್ಯಾಯಿನಿ ಹರಿಣಾಕ್ಷಿ ಮತ್ತು ಅಧ್ಯಾಪಕ ವೃಂದದವರನ್ನು ಹಾಗೂ ವಿದ್ಯಾರ್ಥಿ ಪೋಷಕರನ್ನು, ಅಧಿಕಾರಿ ವರ್ಗದವರನ್ನು ಮತ್ತು ಸಹಕರಿಸಿದ ಸರ್ವರನ್ನು ತೆಕ್ಕಿಲ್ ಮಾದರಿ ಶಾಲೆಯ ಅಧ್ಯಕ್ಷರಾದ ಟಿ.ಎಂ.ಶಹೀದ್ ಹಾಗೂ ಸಂಚಾಲಕಿ ಶಮಾ ಶಹೀದ್‌ರವರು ಅಭಿನಂದಿಸಿದ್ದಾರೆ.

2015 ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗುತ್ತಿಗಾರು ಬ್ಲೆಸ್ಡ್ ಕುರಿಯಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 25 ವಿದ್ಯಾರ್ಥಿಗಳಲ್ಲಿ 9 ಮಂದಿ ವಿಶೇಷ ಶ್ರೇಣಿ, 10 ಮಂದಿ ಪ್ರಥಮ ಶ್ರೇಣಿ, ೪ ಮಂದಿ ದ್ವಿತೀಯ ಶ್ರೇಣಿ ಹಾಗೂ 2 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಸ್ಪಂದನಾ ಪಿ.ಜೆ 598 ಅಂಕ, ಸಿಂಚನ ಪಿ.ಡಿ 596 ಅಂಕ, ಸೌಜನ್ಯ 589 ಅಂಕ, ಅರ್ಚನಾ 585 ಅಂಕ, ವರುಣ್ ಎಸ್.ಎಲ್ 578 ಅಂಕ, ಶ್ರೇಯಾ 573 ಅಂಕ, ಅನ್ವೇಶ್ ರೈ 570 ಅಂಕ, ಸುಕನ್ಯ 569 ಅಂಕ, ಶ್ವೇತಾ 567 ಅಂಕ ಪಡೆದುಕೊಂಡಿದ್ದಾರೆ.

kuriyakose

2015 ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚೊಕ್ಕಾಡಿ ಸತ್ಯಸಾಯಿ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಅನುಶ್ರೀ ಎಸ್.ಎನ್. 599 ಅಂಕ, ಅಮೃತ್ 593 ಅಂಕ, ಲಕ್ಷ್ಮೀ ಎಲ್.ಎನ್. 588 ಅಂಕ, ಪ್ರಶಾಂತ್ ಬಿ.ಎಸ್.588 ಅಂಕ, ಮಹಾಂತೇಶ್ ಆರ್.ಸಿ. 586 ಅಂಕ, ಮೇಘ ಮೇಟಿ 585 ಅಂಕ, ಸುಜಾತ ಹೆಚ್.ಎ. 585 ಅಂಕ, ಬಾನ್ಯ ಸಿಂಪ್ಲಿ 580 ಅಂಕಪಡೆದುಕೊಂಡಿದ್ದಾರೆ.

sathyasayi

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.