ದೇವರಕೊಲ್ಲಿ ಶ್ರೀಚಾಮುಂಡೇಶ್ವರಿ ದೇವಳದಲ್ಲಿ ವಿಸ್ಮಯ: ಹರಿದು ಬರುತ್ತಿರುವ ಜನಸಾಗರ

Advt_Headding_Middle
Advt_Headding_Middle

ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಳದ ಜೀರ್ಣೋದ್ಧಾರಕ್ಕೆಂದು ಭೂಮಿ ಸಮತಟ್ಟು ಮಾಡಿದಲ್ಲಿ ಮಣ್ಣು ಉಕ್ಕಿ ಮೇಲೆ ಬಂದಿದ್ದು, ಇದನ್ನು ಪವಾಡ ಎಂದು ನಂಬಿರುವ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಧಾರ್ಮಿಕ ಕೇಂದ್ರಗಳು ಎಂದ ಮೇಲೆ ಅಲ್ಲಿ ನಂಬೆಕೆಯೇ ಪ್ರಧಾನ. ಅಲ್ಲಿ ಏನೇ ನಡೆದರೂ ಅದು ವಿಸ್ಮಯವಾಗುತ್ತದೆ. ಇದೇ ರೀತಿಯ ವಿಸ್ಮಯವನ್ನು ಸೃಷ್ಟಿ ಮಾಡಿರುವ ದೇವಾಲಯವೊಂದು ಸಂಪಾಜೆ ಸಮೀಪದ ದೇವರಕೊಳ್ಳಿಯಲ್ಲಿ ಸಾವಿರಾರು ಭಕ್ತರನ್ನು ಸೆಳೆಯುತ್ತಿದೆ.
ದೇವಾಲಯ ಇರುವ ಹಿಂಭಾಗದಲ್ಲಿ ಭೂಮಿ ಬಿರುಕು ಬಿಟ್ಟು ಸುಮಾರು 3-4 ಅಡಿ ಭೂಮಿ ಮೇಲಕ್ಕೆ ಬರುತ್ತಿದೆ. ಮುಂಭಾಗದ ಪಯಸ್ವಿನಿ ಹೊಳೆಯಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಗಾತ್ರದ ದೇವರ ಮೀನುಗಳು ಪ್ರತ್ಯಕ್ಷವಾಗಿ ಅಚ್ಚರಿಗೆ ಕಾರಣವಾಗಿದೆ. ಸುತ್ತಲೂ ಕಾಡು ಬೆಟ್ಟ ಗುಡ್ಡಗಳು ತುಂಬಿರುವ ಸುಂದರ ಹಚ್ಚ ಹಸಿರು ಪ್ರಕೃತಿಯ ಸೌಂದಂii ಈ ಮಧ್ಯೆ ವಿಶ್ಮಯವನ್ನು ಸೃಷ್ಟಿನಿಂತ ದೇವಿಯ ದೇಗುಲ. ದೇವಾಲಯ ನೋಡಿದೊಡಲೇ ಎಂತವರಲ್ಲಿಯೂ ಕೂಡ ಪೂಜ್ಯ ಭಾವನೆ ಉಂಟು ಮಾಡುತ್ತದೆ. ಇಂತಹ ದೇಗುಲವೇ ಸಾವಿರಾರು ಇತಿಹಾಸ ಹೊಂದಿರುವ ದೇವರಕೊಳ್ಳಿಯ ಶ್ರೀಚಾಮುಂಡೇಶ್ವರಿ ದೇವಾಲಯ ಮಾಣಿ-ಮೈಸೂರು ಹೆದ್ದಾರಿಯ ಬದಿಯಲ್ಲೇ ಇರುವ ಈ ದೇವಾಲಯ ಅಚ್ಚರಿಗೆ ಕಾರಣವಾಗಿದೆ.
ಇಷ್ಟಕ್ಕೂ ಇಲ್ಲಿನ ಅಚ್ಚರಿಗೆ ಕಾರಣ ದೇವಾಲಯದ ಜೀಣೋದ್ದಾರ ಕಾರ್ಯ. ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆಂದು ದೇವರ ಸನ್ನಿದಿಯಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಪ್ರಶ್ನೆಯಲ್ಲಿ ದೇವಾಲಯಕ್ಕೆ 1800 ವರ್ಷಗಳ ಇತಿಹಾಸ ಇದೆ ಎಂದು ತಿಳಿದು ಬಂದಿದೆ. ದೇವಾಲಯ ಸ್ಥಳಿಯ ರಬ್ಬರ್ ತೋಟಕ್ಕೆ ಹೊಂದಿಕೊಂಡಿ ರುವುದರಿಂದ ತೋಟದ ಮಾಲೀಕರು ಸ್ವಲ್ಪ ಜಾಗವನ್ನು ದೇವಾಲಯಕ್ಕೆ ನೀಡಿದರು. ಇದರಲ್ಲಿ ಜೀರ್ಣೋದ್ದಾರ ಕಾರ್ಯ ಆರಂಭಿಸಿದ ಗ್ರಾಮಸ್ಥರಿಗೆ ಅಚ್ಚರಿಯೊಂದು ಕಾದಿತ್ತು. ದೇವಾಲಯಕ್ಕೆ ಜಾಗ ಸಮತಟ್ಟು ಮಾಡಿದ ದಿನವೇ ಭೂಮಿ ಒಡೆದು ಸುಮಾರು 3-4 ಅಡಿ ಭೂಮಿ ಮೇಲಕ್ಕೆ ಬಂದಿತ್ತು. ಈ ಬಗ್ಗೆ ಪ್ರಶ್ನೆ ಹಾಕದಾಗ ದೇವಿಗೆ ಜಾಗ ಸಾಕಗುತ್ತಿಲ್ಲ. ಇದಕ್ಕಾಗಿ ದೇವಿ ತನಗೆ ಬೇಕಾದ ಜಾಗವನ್ನು ಅವಳೆ ಪಡೆಯುತ್ತಿದ್ದಾಳೆ ಎನ್ನುವ ಉತ್ತರ ಬಂತು ಎನ್ನುತ್ತಾರೆ ದೇವಳದ ಆಡಳಿತ ಸಮಿತಿಯ ಕೃಷ್ಣ.

ಇದಾದ ಸ್ವಲ್ಪ ದಿನದ ಬಳಿಕ ಸುಮಾರು ಒಂದು ಏಕರೆ ಪ್ರದೇಶ ಬಿರುಕು ಬಿಟ್ಟು ಸಣ್ಣ ಕಂದಕ ನಿರ್ಮಾಣವಾಗಿದೆ. ಇವೆಲ್ಲದರ ವಿಸ್ಮಯವಾಗಿ ದೇವಾಲಯದ ಹಿಂಭಾಗದ ಮಣ್ಣು ಮೇಲೆ ಬರುತ್ತಿದೆ. ಪಕ್ಕದಲ್ಲೇ ಜಲ ಮೂಲ ಕೂಡ ಪ್ರತ್ಯಕ್ಷವಾಗಿದೆ. ಇದು ಸ್ಥಳೀಯ ಜನರ ಅಚ್ಚರಿಗೆ ಕಾರಣವಾಗಿದೆ. ಇದನ್ನು ನೋಡಲೆಂದೇ ದಿನದಿಂದ ದಿನಕ್ಕೆ ಜನಜಾಗರವೇ ಬರುತ್ತಿದೆ. ದೇವರಕೊಲ್ಲಿಯಲ್ಲಿ ಈ ರೀತಿ ತಾಯಿ ಚಾಮುಂಡೇಶ್ವರಿ ಕಾಣಿಸಿಕೊಂಡಿದ್ದಾಳೆ ಎನ್ನುತ್ತಾರೆ ಭಕ್ತರು.

5sul-devarakolli mannu (2) 5sul-devarakolli mannu (3) 5sul-devarakolli mannu 5sul-devarkolli mannu 6sul-devarakolli
ಬ್ರಿಟಿಷರ ಆಳ್ವಿಕೆಯ ಕಾಲದಿಂದ ಸುಮಾರು 1500 ಎಕ್ರೆ ಜಾಗದಲ್ಲಿ ರಬ್ಬರ್ ಮತ್ತು ಇತರ ಕೃಷಿ ಉತ್ಪನ್ನಗಳು ಬೆಳೆಯುತ್ತಿದ್ದು, ಆವೇಳೆ ಕೂಲಿ ಕಾರ್ಮಿಕರ ಅಭಾವವನ್ನು ಎದುರಿಸುತ್ತಿದ್ದ ಜಾಗದ ಮಾಲೀಕರು ಕೇರಳ ಮತ್ತು ತಮಿಳು ನಾಡು ಮೂಲಕ ಕಾರ್ಮಿಕರನ್ನು ಕೆಲಸಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಮಿಕರ ೨೫ ಕುಟುಂಬಗಳಿದ್ದು ಇವರು ಅಮ್ಮ ಚಾಮುಂಡೇಶ್ವರಿ ದೇವಿಯ ಮತ್ತು ವೀರಭದ್ರ ದೇವರ ಆರಾಧನೆ ನಡೆಯಿತು. ಪ್ರಾರಂಭದಲ್ಲಿ ಸುಮಾರು ೬೦ವರ್ಷಗಳ ಹಿಂದೆ ಸಂಪಿಗೆ ಮರದ ಕೆಳಗಡೆ ದೇವಿಯ ವಿಗ್ರಹ ವಿಟ್ಟು ಪೂಜೆಗಳು ನಡೆಯುತ್ತಿತ್ತು. ಬಳಿಕ ಗುಡಿಯನ್ನು ನಿರ್ಮಾಣ ಮಾಡಿಕೊಂಡು ಪೂಜೆ, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿತ್ತು. ಬಳಿಕ ಜ.14ರಂದು ಪೊಂಗಲ್ ವಾರ್ಷಿಕ ಹಬ್ಬ ನಡೆಯುತ್ತಿದ್ದು ಬಳಿಕ ಸಂಕ್ರಮಣದಂದು ಸಂಕ್ರಮಣ ಪೂಜೆಯಾಗಿ ನಡೆಸುತ್ತಿದ್ದರು. 2013ರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಗೊಳಿಸುವ ಉದ್ದೇಶದಿಂದ ದೇವಳದ ಸಮಿತಿ ರಚನೆ ಮಾಡಿಕೊಂಡು ಕಲ್ಲಾರು ಬಾಲಕೃಷ್ಣ ನೇತೃತ್ವದಲ್ಲಿ ಅಷ್ಟಮಂಗಲ ನಡೆದು ಜೀರ್ಣೋದ್ಧಾರ ಕೆಲಸ ಪ್ರಾರಂಭಿಸಲು ನಿರ್ಧಾರ ಮಾಡಲಾಯಿತು. ಕೆಲವು ತಿಂಗಳುಗಳ ಬಳಿಕ ದೇವರ ಕೊಲ್ಲಿಯಲ್ಲಿ ದೇವಾಲಯ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಮಣ್ಣು ಸಮತಟ್ಟು ಮಾಡಲಾಯಿತು. ಈ ಬಗ್ಗೆ ಪ್ರಚಾರವಾಗುತ್ತಿದ್ದಂತೆ ರಸ್ತೆಯಲ್ಲಿ ಹಾದು ಹೋಗುತ್ತಿರುವ ಜನರು ಮತ್ತು ಕೊಡಗಿನ ಜನ, ಹತ್ತಿರದ ಊರವರು ಭರಲಾರಂಬಿಸಿದ್ದಾರೆ. ಇದರಿಂದ ದಿನಕಳೆದಂತೆ ಕುತೂಹಲದಿಂದ ನೋಡಲೆಂದೇ ಜನಸಾಗರವೇ ಹರಿದು ಬರುತ್ತಿದೆ.
ಈ ದೇವಾಲಯದಲ್ಲಿ ನಡೆಯುವ ಅಚ್ಚರಿಗಳಿಗೆ ಕಾರಣವಾಗಿದ್ದು ಭಕ್ತರು ಅತ್ಯಂತ ಕುತೂಹಲದಿಂದ ಈ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರಾಕೃತೀಕ ಮತ್ತು ವೈಜ್ಞಾನಿಕ ಕಾರಣಗಳು ಏನೇ ಇದ್ದರೂ ಇಲ್ಲಿ ನಡೆಯುವ ವಿಸ್ಮಯ ಭಕ್ತರ ಭಕ್ತಿಭಾವವನ್ನು ಮತ್ತಷ್ಟೂ ಹೆಚ್ಚಿಸಿದೆ.
ಇದರ ಬೆನ್ನಲ್ಲೇ ದೇವಾಲಯದ ಎದುರಿನ ಪಯಸ್ವಿನಿ ಹೊಳೆಯಲ್ಲಿ ಇದ್ದಕ್ಕಿದಂತೆ ದೊಡ್ಡ ದೊಡ್ಡ ಗಾತ್ರದ ದೇವರ ಮೀನುಗಳು ಗೋಚರವಾಗಿದೆ. ಈ ಎಲ್ಲ ವಿಸ್ಮಯಗಳು ಮೂಡಿ ಬಂದಿರುವುದು ದೇವಲಾಯ ಜೀರ್ಣೋದ್ದಾರ ಕಾರ್ಯ ಆರಂಭಗೊಂಡ ಬಳಿಕ ಎನ್ನುತ್ತಾರೆ ಸ್ಥಳೀಯರು. ಇದು ತಾಯಿ ಚಾಮುಂಡೇಶ್ವರಿಯ ಮಹಿಮೆ ಎಂಬುದು ಭಕ್ತರ ನಂಬಿಕೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.