HomePage_Banner
HomePage_Banner

ಕೆ.ವಿ.ಜಿ. ಕೈಗಾರಿಕಾ ತರಬೇತಿಗೆ ಆನ್‌ಲೈನ್ ಪ್ರವೇಶ

2015-16ನೇ ಸಾಲಿನ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐ.ಟಿ.ಐ) ಪ್ರವೇಶಾತಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು, ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ.
ಪ್ರವೇಶಾತಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ದಿನಾಂಕ 5.6.2015ರ ಒಳಗಾಗಿ ತಮ್ಮ ಶೈಕ್ಷಣಿಕ ಹಾಗೂ ಮೀಸಲಾತಿ ಆಧಾರದ ದಾಖಲೆ ಪತ್ರಗಳೊಂದಿಗೆ ಸಂಸ್ಥೆಯ ಕಛೇರಿಗೆ ಬಂದಲ್ಲಿ ತಮ್ಮ ಅರ್ಜಿಗಳನ್ನು ಉಚಿತವಾಗಿ ತಮ್ಮ ಸಮ್ಮುಖದಲ್ಲೇ ಅಪ್‌ಲೋಡ್ ಮಾಡಿಕೊಡಲಾಗುವುದು. ನವದೆಹಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (ಎನ್.ಸಿ.ವಿ.ಟಿ) ಹಾಗೂ ಕರ್ನಾಟಕ ಸರಕಾರದ ಮಾನ್ಯತೆ ಪಡೆದ, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಮೆಕಾನಿಕ್ ಮೋಟಾರು ವಾಹನ ಎಂಬ ಮೂರು ವೃತ್ತಿಗಳಲ್ಲಿ ಸರಕಾರ ಸೂಚಿಸಿರುವ ಮೀಸಲಾತಿಗನುಗುಣವಾಗಿ ಪ್ರವೇಶ ಪಡೆಯಲು ಸಂಸ್ಥೆಯಲ್ಲಿ ಅವಕಾಶವಿರುತ್ತದೆ. ಈ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.