ಕೊಡಗು ಸಂಪಾಜೆ ಶಾಲಾ ಮುಖ್ಯ ಶಿಕ್ಷಕ ಬುದ್ದ ನಾಯ್ಕರಿಗೆ ನಿವೃತ್ತಿ – ಸನ್ಮಾನ.

Advt_Headding_Middle
Advt_Headding_Middle
Advt_Headding_Middle

ಕೊಡಗು ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರೇತರ ಮುಖ್ಯಶಿಕ್ಷಕ ಬುದ್ದ ನಾಯ್ಕರವರು ಮೇ.೩೦ ರಂದು ಸೇವೆಯಿಂದ ನಿವೃತ್ತಿಗೊಂಡಿದ್ದು, ಜೂನ್ 1.ರಂದು ಕೊಡಗು ಸಂಪಾಜೆ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಪಂಜದ ದಿವಂಗತ ಈಶ್ವರ ನಾಯ್ಕ, ಸೀತಮ್ಮ ದಂಪತಿಗಳ ಪುತ್ರರಾದ ಬುದ್ದ ನಾಯ್ಕರು 30ವರ್ಷಗಳಷ್ಟು ದೀರ್ಘಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಪಂಜದಲ್ಲಿ ಕಂಪೌಂಡರ್ ಆಗಿ ವ್ಯೆದಕೀಯ ಸೇವೆ ಸಲ್ಲಿಸಿದ್ದರು. ಆ ಬಳಿಕ ಗೋಣಿಕೊಪ್ಪ ದುರ್ಗ ಕ್ಲಿನಿಕ್‌ನಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದರು. ವ್ಯೆದ್ಯಕೀಯ ಡಿಗ್ರಿ ಪಡೆಯದಿದ್ದರೂ ಅನೇಕ ಕಾಯಿಲೆಗಳಿಗೆ ಔಷದಿ ನೀಡುತ್ತಿದ್ದರು.
1985ರ ಜೂನ್ 6 ರಂದು ವಿರಾಜಪೇಟೆ ತಾಲೂಕಿನ ಬೆಸಗೂರು ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಬುದ್ದ ನಾಯ್ಕರು 1990 ರಲ್ಲಿ ತಿತಿಮತಿ ಶಾಲೆಗೆ ವರ್ಗಾವಣೆಗೊಂಡು 1995 ರಲ್ಲಿ ಊರುಬೈಲು ಶಾಲೆಗೆ ಕೇಡರ್ ಮುಖ್ಯಶಿಕ್ಷಕರಾಗಿ ಭಡ್ತಿ ಹೊಂದಿ ವರ್ಗಾವಣೆಗೊಂಡರು.
2001 ಎಪ್ರಿಲ್ 12  ರಂದು ಪದವಿರೇತರ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ಸಂಪಾಜೆಗೆ ಬಂದರು. 14 ವರ್ಷ ಕಾಲ ಇಲ್ಲಿ ಸೇವೆಸಲ್ಲಿಸಿ ಶಾಲೆಯ ಶೈಕ್ಷಣಿಕ ಅಭಿವೃದ್ದಿ ಜೊತೆಗೆ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದರು. ಶಾಲೆಯ ಸುವರ್ಣಮಹೋತ್ಸವ ಆಚಾರಿಸಿ ಅದರ ಸವಿನೆನಪಿಗಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ನಡೆಸಿದ್ದರು. ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ನೌಕರರ ಸಂಘ ಸಂಪಾಜೆ ರಚನೆಯಾದಾಗ ಅದರ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಬುದ್ದ ನಾಯ್ಕರ ಸಾಧನೆಯನ್ನು ಪರಿಗಣಿಸಿ 2002-03 ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸಿ, ಹಾಗೂ 2009-10 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಸುಳ್ಯ ಲ್ಯಾಂಪ್ ಸೊಸೈಟಿಯಲ್ಲಿ ಉದ್ಯೋಗಿ ಆಗಿರುವ ಪತ್ನಿ ಪುಷ್ಪಾವತಿ, ಇಂಜಿನಿಯರ್ ವಿದ್ಯಾರ್ಥಿನಿಯಾಗಿರುವ ಪುತ್ರಿ ರಚನ ಹಾಗೂ ಬಿ.ಎಸ್ಸಿ ವಿದ್ಯಾರ್ಥಿ ಅಗಿರುವ ಪುತ್ರ ಅಜಿತ್ ಬುದ್ದನಾಯ್ಕರ ಕುಟುಂಬ.
ನಿವೃತ್ತರಾದ ಬುದ್ದ ನಾಯ್ಕರಿಗೆ ಜೂನ್ 1.ರಂದು ಕೊಡಗು ಸಂಪಾಜೆ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.