ಸಿಡಿಲು ಬಡಿದ ದುಗ್ಗಲಡ್ಕ ಶಾಲೆಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ

Advt_Headding_Middle
Advt_Headding_Middle

ಇತ್ತೀಚೆಗೆ ದುಗ್ಗಲಡ್ಕ ಪ್ರೌಡ ಶಾಲೆಗೆ ಸಿಡಿಲು ಬಡಿದು ಹಾನಿಗೊಂಡು ಅಪಾರ ನಷ್ಟವಾಗಿದ್ದು, ರಾಜ್ಯಸರಕಾರ ದಿಂದ ಪರಿಹಾರ ಧನ ಮಂಜೂರಾಗಿದೆ. ಈ ಕುರಿತು ತಕ್ಷಣ ಪ್ರತಿಕ್ರಿಯಿಸಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಸುಳ್ಯದ ಶಿಕ್ಷಣ ಅಧಿಕಾರಿಗಳ ಜೊತೆಗೆ ಚರ್ಚಿಸಿ ವರದಿಯನ್ನು ಪಡೆದುಕೊಂಡು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮುಖಾಂತರ ಮನವಿ ಮಾಡಿಕೊಂಡಾಗ ಮನವಿಗೆ ತಕ್ಷಣ ಸ್ಪಂದಿಸಿದ ಶಿಕ್ಷಣ ಸಚಿವರು, ಅಧಿಕಾರಿಗಳು ಕೋರಿಕೊಂಡಂತೆ ರೂ. 2 ಲಕ್ಷ ಅನುದಾನ ಬಿಡುಗಡೆಗೊಳಿಸುವಂತೆ ಇಲಾಖೆಗೆ ನಿರ್ದೇಶಿಸಿರುತ್ತಾರೆ. ಮಾತ್ರವಲ್ಲದೆ ಸುಬ್ರಹ್ಮಣ್ಯದ ಸರಕಾರಿ ಶಾಲೆಗೆ ಅನ್ನದಾಸೋಹ ಹಾಗೂ ಶೌಚಾಲಯ ಕಟ್ಟಡ/ ದುರಸ್ಥಿ ಹಾಗೂ ವಾಹನ ವ್ಯವಸ್ಥೆಗೆ ಅನುದಾನ ಅಲ್ಲದೇ ಸುಳ್ಯದ ಗಾಂಧಿನಗರ ಜೂನಿಯರ್ ಕಾಲೇಜಿಗೆ ಕಾಮರ್ಸ್ ವಿಭಾಗ ತೆರೆಯುವಂತೆ ಸೂಚನೆಯನ್ನು ನೀಡಿ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಮಡ್ಕ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಹೇಶ್ ಕರಿಕ್ಕಳ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ಉಪಸ್ಥಿತರಿದ್ದರು

ANUDHANA BIDUGADE PHOTO copy

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.