ಕಲ್ಮಕಾರು ಶಾಲೆಯಲ್ಲಿ ದತ್ತಿನಿಧಿ ವಿತರಣಾ ಕಾರ್ಯಕ್ರಮ

Advt_Headding_Middle
Advt_Headding_Middle

ಕಲ್ಮಕಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತಿನಿಧಿ ವಿತರಣಾ ಕಾರ್ಯಕ್ರಮ ಜೂನ್  11ರಂದು ನಡೆಯಿತು ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಟಿ.ಎನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದತ್ತಿನಿಧಿ ದಾನಿಗಳಾದ ಉಮೇಶ್ ಬಿಳಿಮಲೆ,ಕೊಲ್ಲಮೊಗರು ಗ್ರಾಮಪಂಚಾಯತ್‌ನ ನೂತನ ಸದಸ್ಯರಾದ  ಶ್ರೀಮತಿ ವೀಣಾ , ಮಕ್ಕಳ ಸುರಕ್ಷಾ ಸಮಿತಿಯ ಸದಸ್ಯರಾದ  ಬಾಲಕೃಷ್ಣ ಕೊಪ್ಪಡ್ಕ, ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷರಾದ  ಗಣೇಶ್ ಇಡ್ಯಡ್ಕ ಹಾಗೂ ಧ.ಗ್ರಾ.ಯೋಜನೆ ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾದ  ನಾರಾಯಣ ಪನ್ನೆ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದರು.

7ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ಕು|ಗೌರಿಪ್ರಿಯಾ ಪಿ.ವಿ ಹಾಗೂ ಕು|ಕೃಪಾ ಕೆ.ವಿ ಇವರಿಗೆ   ಉಮೇಶ್ ಬಿಳಿಮಲೆ ದತ್ತಿನಿಧಿಯನ್ನು ನೀಡಿದರು.  ಕು|ಜ್ಯೋತಿ. ಎಂ   ಮಹೇಶ್ ಕೆ.ಪಿ. 7ನೇ ತರಗತಿ ಉತ್ತೀರ್ಣರಾದ ಬಡ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಶ್ರೀಮತಿ ಪದ್ಮಾ ರಾಘವ, ಎಸ್.ಡಿ,ಎಂ.ಸಿ.ಸದಸ್ಯರುಗಳು, ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಬೊಳಿಯಮ್ಮ.ಡಿ.ಹಾಗೂ ಸಹಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಶೈನಿ.ಕೆ. ಸ್ವಾಗತಿಸಿ, ನಿರೂಪಿಸಿದರು.ಹಾಗೂ ಗೌರವ ಶಿಕ್ಷಕಿ ಕು|ಶ್ವೇತಾ ಪಿ. ವಂದಿಸಿದರು.

kalmakarau (1)

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.