ಬೆಳ್ಳಾರೆ: ಸ್ನಾತಕೋತ್ತರ ಕೋರ್ಸುಗಳ ಆರಂಭ

Advt_Headding_Middle
Advt_Headding_Middle

ಬೆಳ್ಳಾರೆಯ ಪೆರುವಾಜೆಯಲ್ಲಿರುವ ಡಾ.ಕೆ.ಶಿವರಾಮ ಕಾರಂತ ಸರ್ಕಾರಿ  ಪ್ರಥಮ ದರ್ಜೆ  ಕಾಲೇಜು ಈ ಸಾಲಿನಲ್ಲಿ ಕಾಲೇಜು ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಈ ಸಾಲಿನಿಂದ ಎಂ.ಕಾಂ. ಹಾಗೂ ಎಂ.ಎಸ್.ಡಬ್ಲ್ಯೂ ಕೋರ್ಸು ಆರಂಭಿಸಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಸರ್ಕಾರದ  ಆದೇಶ ಸದ್ಯದಲ್ಲಿ ಬರಲಿದ್ದು ಈಗಾಗಲೇ ಎಂ.ಕಾಂ. ವಿಭಾಗಕ್ಕೆ ಸರ್ಕಾರದ  ಅನುಮತಿಯ ನೀರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆ ದೊರೆತಿದ್ದು ಎಂ.ಎಸ್.ಡಬ್ಲ್ಯೂ ಕೋರ್ಸ್ ನ  ಸಂಯೋಜನೆಗೆ ವಿಶ್ವವಿದ್ಯಾನಿಲಯ ಸ್ಥಳೀಯ ಪರಿಶೀಲನಾ ಸಮಿತಿಯು ಭೇಟಿ ನೀಡಿ ವರದಿ ಸಲ್ಲಿಸಿದೆ. ಈಗಾಗಲೇ ಅರ್ಜಿ ಗಳನ್ನು ವಿತರಿಸಲಾಗುತ್ತಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.