ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಚರ್ಚಾ ಸಭೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಮಟ್ಟದ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಚರ್ಚಾ ಸಭೆಯು ಸುಳ್ಯ ಪದವಿ ಪೂರ್ವ ಕಾಲೇಜ್ನ ಸಭಾಂಗಣದಲ್ಲಿ ಜೂ.29ರಂದು ನಡೆಯಿತು.
ಮುಂದಿನ ದಿನಗಳಲ್ಲಿ ಶಿಕ್ಷಣದ ಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು? ಮತ್ತು ಇದಕ್ಕನುಗುಣವಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ಎಸ್.ಡಿ.ಎಂ.ಸಿ. ಪೋಷಕ ವೃಂದ ಯಾವ ರೀತಿಯಲ್ಲಿ ಇದರ ಬಗ್ಗೆ ಗಮನ ನೀಡಬೇಕು ಎಂಬುದನ್ನು ಚರ್ಚಿಸಲಾಯಿತು.
ಒಂದನೇ ತರಗತಿಯಲ್ಲಿ ಕೇವಲ 10 ವಿದ್ಯಾರ್ಥಿಗಳಿಗೆ ಮಾತ್ರ ಹಾಗೂ ಪ್ರತಿಯೊಂದು ತರಗತಿಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಇರಬೇಕು. ಏಕರೂಪ ಶಿಕ್ಷಣ ಕಡ್ಡಾಯವಾಗಿ ಬರಬೇಕು. ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಒಂದೇ ರೀತಿಯ ಶಿಕ್ಷಣ ನೀಡಬೇಕು, ಶಾಲೆಗಳಲ್ಲಿ ಅಧ್ಯಾಪಕರು ನಿಯಮಿತವಾಗಿ ಬರುತ್ತಿದ್ದು, ಆದರೆ ಕೆಲವು ಕೆಲಸ ಕಾರ್ಯಗಳಿಂದ ತರಗತಿಗಳಿಗೆ ಅಧ್ಯಾಪಕರುಗಳ ಪ್ರವೇಶ ಕುಂಠಿತವಾಗುತ್ತದೆ. ಶಾಲೆಯ ಅನ್ಯ ಕಾರ್ಯಗಳು ಶಿಕ್ಷಕರಿಗೆ ಜಾಸ್ತಿಯಾಗಿದೆ. ಪರೀಕ್ಷಾ ಪದ್ಧತಿ ಇಲ್ಲದ ಕಾರಣ ಮಕ್ಕಳಲ್ಲಿ ನೆನಪಿನ ಶಕ್ತಿ ಕುಂಠಿತಗೊಳ್ಳುವುದು ಮತ್ತು ಜವಾಬ್ದಾರಿಯು ಕಡಿಮೆಯಾಗುವುದು. ಪೋಷಕರು ಶಾಲೆಯ ಬಗ್ಗೆ ಗಮನ ಹರಿಸದೇ ಇರುವುದು, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸದೇ ಇರುವುದು, ಪೋಷಕರು ಮಕ್ಕಳಲ್ಲಿ ಶಾಲೆಯಲ್ಲಿ ನಡೆಯುವ ಇತರ ಸಾಂಸ್ಕೃತಿಕ-ಆಟೋಟ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಪ್ರೋತ್ಸಾಹ ನೀಡುವುದು. ಗ್ರಾಮಗಳಲ್ಲಿ ಸರಕಾರವು 1ಕ್ಕಿಂತ ಹೆಚ್ಚು ಶಾಲೆಗಳಿಗೆ ಅನುಮತಿ ನೀಡಬಾರದು ಎಂದು, ನೀಡಿದ್ದಲ್ಲಿ ಶಾಲೆಗಳ ಸ್ಪರ್ಧೆ ಏರ್ಪಡುತ್ತದೆ. ಇವುಗಳನ್ನು ತಡೆಗಟ್ಟಲು ಆಯಾ ಗ್ರಾಮಗಳಲ್ಲಿ ಸಮಿತಿ ರಚಿಸುವುದು. ತಾಲೂಕಿನಲ್ಲಿ ಒಂದು ವಿಶೇಷ ವಸತಿ ಶಾಲೆಗಳ ನಿರ್ಮಾಣ ಮಾಡುವುದು. ಪಠ್ಯ ಪುಸ್ತಕಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಒಂದೇ ಪುಸ್ತಕದಲ್ಲಿ ಮುದ್ರಣವಾಗಿ ಕಲಿಕೆಯು ಜೊತೆ ಜೊತೆಯಾಗಿ ಒಂದೇ ರೀತಿಯಲ್ಲಿ ಹೋಗಬೇಕು. ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಚಂದ್ರಶೇಖರ ದಾಮ್ಲೆ, ಅಕ್ಷರ ದಾಮ್ಲೆ, ಚಂದ್ರಶೇಖರ ಹಾಸನಡ್ಕ, ಮಂಜುನಾಥ್, ಪ್ರತಿಭಾ ವಿದ್ಯಾಲಯದ ಪ್ರಾಂಶುಪಾಲ ವೆಂಕಟ್ರಾಮ್ ಭಟ್, ಜಯನಗರ ಪ್ರಭಾರ ಮುಖ್ಯೋಪಾಧ್ಯಾಯ ತೀರ್ಥರಾಮ್, ಸ.ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕ ನಟರಾಜ್, ಶಿಕ್ಷಕಿಯರಾದ ಭವಾನಿ, ಗೀತಾ, ರೂಪವಾಣಿ, ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು.

hosa rastriya shikshana neethi karadu charcha sabe (1) hosa rastriya shikshana neethi karadu charcha sabe (3) hosa rastriya shikshana neethi karadu charcha sabe (4)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.