ಸುಳ್ಯ ಕರಾವಳಿ ಎಂಟರ್ಪ್ರೈಸಸ್ ಮತ್ತು ಕರ್ನಾಟಕ ಅಗ್ರೋ ಕೆಮಿಕಲ್ಸ್ ಆಶ್ರಯದಲ್ಲಿ ಅಡಿಕೆ, ತೆಂಗು, ರಬ್ಬರ್ ಮತ್ತು ಕಾಳುಮೆಣಸು ಬೆಳೆಗಳಲ್ಲಿ ರೋಗ, ಕೀಟ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಕಾರ್ಯಾಗಾರ ಮತ್ತು ಕೃಷಿ ವಿಚಾರ ಸಂಕಿರಣ ಸುಳ್ಯದ ಜ್ಯೋತಿ ವೃತ್ತದ ಬಳಿ ಕರಾವಳಿ ಟವರ್ಸ್ನ ಕರಾವಳಿ ಸಭಾಭವನದಲ್ಲಿ ಜು.4ರಂದು ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ, ವಿಜಯ ಬ್ಯಾಂಕ್ ನಿವೃತ್ತ ಮೆನೇಜರ್ ಲಕ್ಷ್ಮಿನಾರಾಯಣ ಭಟ್ ಸಂಕಿರಣ ಉದ್ಘಾಟಿಸಿದರು. ಕರ್ನಾಟಕ ಪ್ರಾಂತೀಯ ಮಾರುಕಟ್ಟೆ ವ್ಯವಸ್ಥಾಪಕರು ಹಾಗೂ ಕರ್ನಾಟಕ ಅಗ್ರೋ ಕೆಮಿಕಲ್ಸ್ (ಮಲ್ಟಿಪ್ಲೆಕ್ಸ್)ನ ತಾಂತ್ರಿಕ ಮುಖ್ಯಸ್ಥ ಡಾ.ಎಂ.ನಾರಾಯಣಸ್ವಾಮಿ ವಿಷಯ ಮಂಡಿಸಿ ಸಮೃದ್ದ ಕೃಷಿಗೆ ಕೃಷಿ ಮಾಹಿತಿ ಮತ್ತು ಕೃಷಿ ನಿರ್ವಹಣೆ ಬಗ್ಗೆ ರೈತ ಅಗತ್ಯ ಮಾಹಿತಿ ಹೊಂದಿರಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಆಗ್ರೋ ಕೆಮಿಕಲ್ಸ್ನ ಏರಿಯಾ ಮನೇಜರ್ ದ್ಯಾಮಣ್ಣ ಗೌಡ ಭಾಗವಹಿಸಿದರು. ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ರಾವ್ ಪೈಲೂರು ಅಧ್ಯಕ್ಷತೆ ವಹಿಸಿದರು. ಭಾಗವಹಿಸಿದ ಕೃಷಿಕರ ಪ್ರಶ್ನೋತ್ತರ ನಡೆಯಿತು.
ಕರಾವಳಿ ಎಂಟರ್ಪ್ರೈಸಸ್ ಮಾಲಿಕ ಚೆನ್ನಪ್ಪ ಕುಕ್ಕುಜೆ ವೇದಿಕೆಯಲ್ಲಿದ್ದರು. ಜಲಜಾಕ್ಷಿ ಸ್ವಾಗತಿಸಿದರು. ಶಶಿಧರ ಎಂ.ಜೆ.ಕಾರ್ಯಕ್ರಮ ನಿರೂಪಿಸಿದರು.