suddi channel – ಸುದ್ದಿ ಸುಳ್ಯ http://sullia.suddinews.com ಸದಾ ಹೊಸತನ... Sat, 25 Jun 2022 05:27:34 +0000 en-US hourly 1 https://wordpress.org/?v=5.5.9 ಸಚಿವರಿಂದ ತುರ್ತುಪರಿಸ್ಥಿತಿ ನೆನಪುಗಳ ಪ್ರದರ್ಶಿನಿಯ ಉದ್ಘಾಟನೆ http://sullia.suddinews.com/archives/592503 http://sullia.suddinews.com/archives/592503#respond Sat, 25 Jun 2022 05:27:34 +0000 http://sullia.suddinews.com/?p=592503  ಅಗಲಿದ ಹೋರಾಟದ ಹಿರಿಯ ಚೇತನಗಳ ಭಾವಚಿತ್ರಕ್ಕೆ ಪುಚ್ಪಾರ್ಚನೆ

ಸುಳ್ಯ ಮಂಥನ ವೇದಿಕೆ , ಸೇವಾ ಭಾರತಿ ಹೆಲ್ಫ್ ಲೈನ್ ಟ್ರಸ್ಟ್ ಇದರ ವತಿಯಿಂದ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು , ಹೋರಾಟಗಾರರಿಗೆ ಗೌರವಾರ್ಪಣೆ ‘ಸಂಕೋಲೆ – ಸಂಗ್ರಾಮ -ಸ್ವಾತಂತ್ರ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೆಳಗ್ಗೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕರಾಳ ನೆನಪುಗಳ ಪ್ರದರ್ಶಿನಿ ಯನ್ನು ಸಚಿವ ಎಸ್.ಅಂಗಾರ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ಮಾಡಿ ಮಡಿದ ಚೇತನ ಗಳ ಭಾವಚಿತ್ರಕ್ಕೆ ಪುಚ್ಪಾರ್ಚನೆಗೈದು ಗೌರವ ಸಮರ್ಪಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣ , ಪುಸ್ತಕದ ಲೇಖಕ ಕುಂಞಟ್ಟಿ ಶಿವರಾಮ ಗೌಡ ಮತ್ತು ಸಂಘಟಕರು ಭಾಗವಹಿಸಿದ್ದರು.

]]>
http://sullia.suddinews.com/archives/592503/feed 0
ಬಳ್ಳಕ್ಕ :  ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ   http://sullia.suddinews.com/archives/592489 http://sullia.suddinews.com/archives/592489#respond Sat, 25 Jun 2022 05:23:15 +0000 http://sullia.suddinews.com/?p=592489  

ಗುತ್ತಿಗಾರು ಗ್ರಾಮದ ಬಳ್ಳಕ್ಕದ ಕಾಲನಿಯ ಕೆಲವು ಮನೆಗಳಿಗೆ ಗ್ರಾಪಂ ವತಿಯಿಂದ ನಿರ್ಮಾಣವಾದ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾ ಕುಮಾರಿ, ಭರತ್‌ ಕಮಿಲ ಹಾಗೂ ವಸಂತ ಮೊಗ್ರ ಉಪಸ್ಥಿತರಿದ್ದರು.

ಗುತ್ತಿಗಾರು ಗ್ರಾಮದ ಬಳ್ಳಕ್ಕದ ಕಾಲನಿಯ ಕೆಲವು ಮನೆಗಳಿಗೆ ಹಲವು ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಇದ್ದಿರಲಿಲ್ಲ. ಸಮೀಪದ ಹೊಳೆಯಿಂದ ಅಥವಾ ಆಸುಪಾಸಿನ ಮನೆಗಳಿಂದ ನೀರನ್ನು ಹೊತ್ತ ತರಬೇಕಿತ್ತು. ಮಳೆಗಾಲ ಹೊಳೆಯ ಕಲುಷಿತ ನೀರನ್ನೇ ಕುಡಿಯಬೇಕಾದ ಸ್ಥಿತಿ ಇತ್ತು. ಈ ಬಗ್ಗೆ ಗ್ರಾಪಂ ಯೋಜನೆಯನ್ನು ಬಳಸಿಕೊಂಡು ಗ್ರಾಪಂ ಸದಸ್ಯರು ಈ ಮನೆಗಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದರು. ಶುಕ್ರವಾರ ಮನೆಗಳಿಗೆ ನೀರಿನ ಬಳಕೆಗೆ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭ ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾ ಕುಮಾರಿ, ಭರತ್‌ ಕಮಿಲ ಹಾಗೂ ವಸಂತ ಮೊಗ್ರ , ಗ್ರಾಮ ಭಾರತ ತಂಡದ ಸಂಚಾಲಕ ಸುಧಾಕರ ಮಲ್ಕಜೆ, ಪ್ರಮುಖರಾದ ಬಿಟ್ಟಿ ನೆಡುನೀಲಂ, ಮಹೇಶ್‌ ಪುಚ್ಚಪ್ಪಾಡಿ, ಕಾಮಗಾರಿ ನಡೆಸಿದ ಅಚ್ಚುತ ಮಲ್ಕಜೆ ಹಾಗೂ ಸ್ಥಳೀಯರಾದ ಕುಸುಮಾಧರ, ವಾಸುದೇವ ಮೊದಲಾದವರು ಇದ್ದರು.

]]>
http://sullia.suddinews.com/archives/592489/feed 0
ಸಂಪಾಜೆ : ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ http://sullia.suddinews.com/archives/592487 http://sullia.suddinews.com/archives/592487#respond Sat, 25 Jun 2022 05:04:18 +0000 http://sullia.suddinews.com/?p=592487 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್, ವಿರಾಜಪೇಟೆ, ಸಂಪಾಜೆ ವಲಯ ಮತ್ತು ಕರ್ನಾಟಕ ಅರಣ್ಯ ಇಲಾಖೆ, ಸಂಪಾಜೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ‘ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮವು ಜೂ. 24 ರಂದು ಚೆಂಬು ಗ್ರಾಮದ ಪಯಸ್ವಿನಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮಪಂಚಾಯತ್ ಅಧ್ಯಕ್ಷೆ ಕುಸುಮ. ಕೆ. ಎ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧ. ಗ್ರಾ. ಯೋ. ಯ ಕೊಡಗು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲೀಲಾವತಿ ನೆರವೇರಿಸಿದರು.
ಮುಖ್ಯ ಅಥಿತಿಗಳಾಗಿ ವಲಯ ಅರಣ್ಯಧಿಕಾರಿಗಳಾದ ಮಧುಸೂಧನ್, ಮಡಿಕೇರಿ ತಾಲ್ಲೂಕು ಎ. ಪಿ. ಎಂ. ಸಿ. ಯ ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ ಉಪಾಧ್ಯಾಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಾಧವ ಪಿ. ಕೆ. ಆಗಮಿಸಿದ್ದರು. ವೇದಿಕೆಯಲ್ಲಿ ಯೋಜನಾಧಿಕಾರಿಗಳಾದ ದಿನೇಶ್,ಗ್ರಾಮ ಪಂಚಾಯತ್ ಪಿ. ಡಿ. ಓ. ಕುಮಾರ್, ಕಂದಾಯ ನಿರೀಕ್ಷಕರಾದ ವೆಂಕಟೇಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಕಲಾ. ಕೆ. ಎಸ್, ಸಂಜೀವಿನಿ ಒಕ್ಕೂಟದ ಶ್ರೀಮತಿ ರೇಖಾ ಮತ್ತು ಶ್ರೀಮತಿ ಸುಮಿತ್ರಾ, ಚೆoಬು ಗ್ರಾಮಪಂಚಾಯ್ ಸದಸ್ಯರುಗಳಾದ ರಮೇಶ್ ಹುಲ್ಲುಬೆಂಕಿ, ಗಿರೀಶ್ ಹೊಸೂರು, ವಸಂತ ಎನ್. ಟಿ,ಎಂ. ಮತ್ತು ಯು. ಚೆoಬು ಒಕ್ಕೂಟಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮಪಂಚಾಯತ್ ಮಾಜಿ ಸದಸ್ಯರುಗಳು, ಒಕ್ಕೂಟದ ಪದಾಧಿಕಾರಿಗಳು,ಸಂಘದ ಸದಸ್ಯರುಗಳು, ಸಾರ್ವಜನಿಕರು ಹಾಜರಿದ್ದರು.


ಯೋಜನೆಯ ವಲಯ ಮೇಲ್ವಿಚಾರಕರಾದ ಜಯಶ್ರೀ ಸ್ವಾಗತಿಸಿದರು. ರಮೇಶ್ ವಂದಿಸಿದರು. ಕೃಷಿ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

]]>
http://sullia.suddinews.com/archives/592487/feed 0
ಪ್ರಾಮಾಣಿಕತೆ ಮೆರೆದ ಗುರುಪ್ರಕಾಶ ಕೆ.ಬಿ. http://sullia.suddinews.com/archives/592484 http://sullia.suddinews.com/archives/592484#respond Sat, 25 Jun 2022 04:51:39 +0000 http://sullia.suddinews.com/?p=592484 ಕಲ್ಲುಗು೦ಡಿ ಯಿ೦ದ ಕುದ್ರೆಪಾಯ ರಸ್ತೆ ಮಧ್ಯೆ ಲೀಲಾವತಿ ಕೊಚ್ಚಿ ಎಂಬವರ ಚಿನ್ನದ ಬ್ರೆಸ್ ಲೈಟ್ ಕಳೆದು ಹೊಗಿತ್ತು.

ಅದು ಗುರುಪ್ರಕಾಶ್‌ ಕೆ.ಬಿ. ಕುದ್ರೆಪಾಯ ಎಂಬವರಿಗೆ ದೊರಕಿತ್ತು. ಅದನ್ನು ಅವರು ವಾರಸುದಾರರಿಗೆ ಪ್ರಾಮಾಣಿಕತೆಯಿ೦ದ ಹಿಂತಿರುಗಿಸಿದರು.

]]>
http://sullia.suddinews.com/archives/592484/feed 0
ಬೆಳ್ಳಾರೆ: ಸ್ನೇಹಿತರ ಕಲಾ ಸಂಘದಿಂದ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಸನ್ಮಾನ http://sullia.suddinews.com/archives/592482 http://sullia.suddinews.com/archives/592482#respond Sat, 25 Jun 2022 04:48:46 +0000 http://sullia.suddinews.com/?p=592482  

ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಒಳ್ಳೆಯ ಫಲಿತಾಂಶ ಬರಲು ಕಾರಣರಾದ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದವನ್ನು ಸ್ನೇಹಿತರ ಕಲಾ ಸಂಘ ಬೆಳ್ಳಾರೆಯ ಆಶ್ರಯದಲ್ಲಿ ಇತ್ತೀಚೆಗೆ ಗೌರವಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ಉಮೇಶ್ ಮಣಿಕ್ಕಾರ ಶಿಕ್ಷಕರಾದ ಗಣೇಶ್ ನಾಯಕ್ ಪುತ್ತೂರು, ಚಂದ್ರಶೇಖರ್, ಶರತ್, ಶಿಕ್ಷಕಿ ಅಮಿತ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು, ಕಾರ್ಯದರ್ಶಿ ವಸಂತ್ ಉಲ್ಲಾಸ್ ಜತೆ ಕಾರ್ಯದರ್ಶಿ ಆನಂದ ಉಮಿಕ್ಕಳ, ಮಹಾಲಿಂಗ ಕುರುoಬುಡೇಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆನಂದ ಉಮಿಕ್ಕಳ ಸ್ವಾಗತಿಸಿ ವಸಂತ ಉಲ್ಲಾಸ್ ವಂದಿಸಿದರು ಗಣೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

]]>
http://sullia.suddinews.com/archives/592482/feed 0
ಬಳ್ಪ: ಸಂಪೂರ್ಣ ಸ್ವಚ್ಚತಾ ಕಾರ್ಯಕ್ರಮ http://sullia.suddinews.com/archives/592475 http://sullia.suddinews.com/archives/592475#respond Sat, 25 Jun 2022 04:41:47 +0000 http://sullia.suddinews.com/?p=592475  

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತ ಸ್ವಾತಂತ್ರ್ಯದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಜೂ. 24ರಂದು ಹಮ್ಮಿಕೊಳ್ಳಲಾಯಿತು.
ಗ್ರಾ. ಪಂ. ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ವಸತಿ ಯೋಜನೆಯ ಫಲಾನುಭವಿಗಳು, ಸ್ವಯಂಸೇವಕರು,ಗ್ರಾಮಸ್ಥರು ಭಾಗವಹಿಸಿ ಪಂಚಾಯತಿ ಆವರಣ, ವಾಣಿಜ್ಯ ಕಟ್ಟಡಗಳು ಸುತ್ತಮುತ್ತ, ಮುಖ್ಯ ರಸ್ತೆಯ ಇಕ್ಕೆಲಗಳನ್ನು, ಶಾಲೆಯ ಆವರಣವನ್ನು ಸ್ವಚ್ಛತೆಗೊಳಿಸಲಾಯಿತು.

]]>
http://sullia.suddinews.com/archives/592475/feed 0
ಸುಳ್ಯ ತಾಲೂಕಿನ ಹಲವೆಡೆ ಲಘು ಭೂಕಂಪನದ ಅನುಭವ http://sullia.suddinews.com/archives/592449 http://sullia.suddinews.com/archives/592449#respond Sat, 25 Jun 2022 04:27:51 +0000 http://sullia.suddinews.com/?p=592449 ಸಂಪಾಜೆಯಲ್ಲಿ ಗೋಡೆ ಬಿರುಕು

ಸುದ್ದಿ ಕಚೇರಿಗೆ ಫೋನಾಯಿಸಿ ಅನುಭವ ಹೇಳಿಕೊಳ್ಳುತ್ತಿರುವ ಜನ

ಸುಳ್ಯ ತಾಲೂಕಿನ ಹಲವೆಡೆ ಇಂದು ಬೆಳಿಗ್ಗೆ ಸುಮಾರು 9.13ಕ್ಕೆ ಲಘು ಭೂಕಂಪನದ ಅನುಭವವಾಗಿದೆ.
ಸುಳ್ಯ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ,ಐವರ್ನಾಡು, ಸಂಪಾಜೆ ಸೇರಿದಂತೆ ಹಲವು ಕಡೆ 45 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಲ್ಲಿದ್ದ ಪಾತ್ರೆಗಳು ಅಲ್ಲಾಡಿವೆ. ಕೆಲವೆಡೆ ಗೋಡೆ ಸಣ್ಣದಾಗಿ ಬಿರುಕುಬಿಟ್ಟಿವೆ.


ತಾಲೂಕಿನ ಹಲವೆಡೆಗಳಿಂದ ಜನ ಸುದ್ದಿಗೆ ಫೋನ್ ಮಾಡಿ ಕಂಪನದ ಅನುಭವ ಹೇಳಿಕೊಳ್ಳುತ್ತಿದ್ದಾರೆ.
ಕಪಾಟಿನಲ್ಲದ್ದ ಪಾತ್ರೆಗಳು ಕೆಳಕ್ಕೆ ಬಿದ್ದಿದ್ದು, ಮನೆಯ ಗೋಡೆ ಸ್ವಲ್ಪ ಬಿರುಕುಬಿಟ್ಟಿದೆ ಎಂದು ಸಂಪಾಜೆಯಿಂದ ಅಬೂಸಾಲಿ ತಿಳಿಸಿದ್ದಾರೆ.
ರಬ್ಬರ್ ಟ್ಯಾಪಿಂಗ್ ಮಾಡುವ ವೇಳೆ ಮರ ಅದುರಿದ ಅನುಭವವಾಯಿತೆಂದು ತೊಡಿಕಾನದ ಕೆ.ಕೆ.ನಾರಾಯಣ ಹೇಳಿದ್ದಾರೆ.
ಮನೆಯ ಡಬ್ಬಿ ಶೀಟ್‌ಗಳು ಅಲುಗಾಡಿದ ಅನುಭವವಾಯಿತು ಎಂದು ಅಶ್ರಫ್ ಗುಂಡಿ ತಿಳಿಸಿದ್ದಾರೆ.
ಅಂಗಡಿಯಲ್ಲಿದ್ದ ಭರಣಿಗಳು ಅದುರಿತು ಎಂದು ಸಂಪಾಜೆಯ ಗೋಪಾಲ ತಿಳಿಸಿದ್ದಾರೆ.

ನಾನು ಸ್ನಾನ ಮಾಡುತ್ತಿದ್ದೆ. ಭೂಮಿ ಕಂಪಿಸಿದ ಅನುಭವವಾಯಿತು. ಪಕ್ಕದ ಮನೆಯಲ್ಲಿ ಕೆಲಸ ಆಗುತ್ತಿದ್ದು ಅಲ್ಲಿಂದ ಕಲ್ಲು ಬಿದ್ದುದರಿಂದ ಭೂಕಂಪನ ಆಗಿರಬಹುದೆಂದು ಭಾವಿಸಿದೆ. ಆದರೆ ಮನೆಯಿಂದ ಹೊರಗೆ ಬಂದಾಗ ಎಲ್ಲರೂ ತಮ್ಮ ತಮ್ಮ ಅನುಭವ ಹೇಳುತ್ತಿದ್ದಾರೆ ಎಂದು ನ.ಪಂ. ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಅನುಭವ ಹೇಳಿಕೊಂಡಿದ್ದಾರೆ.
ನಾವು ಮನೆಯಲ್ಲಿ ಕುಳಿತಿದ್ದಾಗ ಚಯರ್ ಯಾರೋ ಅಲುಗಾಡಿಸಿದಂತಾಗಿದೆ. ಇದು ನಮಗೆ ಮಾತ್ರ ಅಲ್ಲ. ಸುತ್ತಮುತ್ತಲಿನ ಜನರು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ ಎಂದು ಅಶೋಕ್ ಪೀಚೆ, ಜನಾರ್ದನ ಕಲ್ಲುಚೆರ್ಪೆ ಹೇಳಿದ್ದಾರೆ.

ತೊಡಿಕಾನದಲ್ಲಿ ಕಂಪಿಸಿದ ಭೂಮಿ

ತೊಡಿಕಾನ ಗ್ರಾಮದ ಬಹುತೇಕ ಕಡೆ ಇಂದು ಬೆಳಿಗ್ಗೆ 9 ಗಂಟೆ 10 ನಿಮಿಷದ ಸುಮಾರಿಗೆ 2 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿದೆ.
ಮನೆಯಲ್ಲಿ ಇದ್ದ ಹಲವರು ಹೊರಗೋಡಿ ಬಂದಿರುವುದಾಗಿ ಹೇಳುತ್ತಿದ್ದು , ಕುಳಿತಿದ್ದವರು 1 ಸೆಕೆಂಡ್ ಅಲುಗಾಡಿದ ಅನುಭವವಾಗಿದೆ. ವಾಹನದಲ್ಲಿ ಹೋಗುತ್ತಿದ್ದವರಿಗೂ ಈ ಅನುಭವ ಉಂಟಾಗಿದೆ ಎಂದು ಹೇಳುತ್ತಿದ್ದಾರೆ. ಗುಡುಗು ಬಂದಂತೆ ಶಬ್ಧವೂ ಉಂಟಾಗಿದೆ. ತೊಡಿಕಾನ ಪೇಟೆಯ ಬಹುತೇಕ ಕಡೆ ಭೂಮಿಯ ಕಂಪನ ಉಂಟಾಗಿದೆ.

 

]]>
http://sullia.suddinews.com/archives/592449/feed 0
ಸುಳ್ಯದಲ್ಲಿ ಲಘು ಭೂಕಂಪನದ ಅನುಭವ http://sullia.suddinews.com/archives/592441 http://sullia.suddinews.com/archives/592441#respond Sat, 25 Jun 2022 04:04:27 +0000 http://sullia.suddinews.com/?p=592441 ಸುಳ್ಯದಲ್ಲಿ ಇಂದು‌ ಬೆಳಿಗ್ಗೆ ಸುಮಾರು 9.13ಕ್ಕೆಲಘು ಭೂಕಂಪನದ ಅನುಭವವಾಗಿದೆ.

ಸುಳ್ಯ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ,ಐವರ್ನಾಡು ಗಳಲ್ಲಿಯೂ ಕಂಪನದ ಅನುಭವವಾದ ಬಗ್ಗೆ ತಿಳಿದು ಬಂದಿದೆ.

]]>
http://sullia.suddinews.com/archives/592441/feed 0
ಸುಳ್ಯದಲ್ಲಿ ಲಘು ಭೂಕಂಪನದ ಅನುಭವ http://sullia.suddinews.com/archives/592440 http://sullia.suddinews.com/archives/592440#respond Sat, 25 Jun 2022 04:04:06 +0000 http://sullia.suddinews.com/?p=592440  

ಸುಳ್ಯದಲ್ಲಿ ಇಂದು‌ ಬೆಳಿಗ್ಗೆ ಸುಮಾರು ಗಂಟೆ 9.12ಕ್ಕೆಲಘು ಭೂಕಂಪನದ ಅನುಭವವಾಗಿದೆ. ಸುಳ್ಯ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ,ಐವರ್ನಾಡು,ಆಲೆಟ್ಟಿ, ತೊಡಿಕಾನಗಳಲ್ಲಿಯೂ ಕಂಪನದ ಅನುಭವವಾದ ಬಗ್ಗೆ ತಿಳಿದು ಬಂದಿದೆ.

]]>
http://sullia.suddinews.com/archives/592440/feed 0
ಸುಳ್ಯದಲ್ಲಿ ಲಘು ಭೂಕಂಪನದ ಅನುಭವ http://sullia.suddinews.com/archives/592442 http://sullia.suddinews.com/archives/592442#respond Sat, 25 Jun 2022 04:04:01 +0000 http://sullia.suddinews.com/?p=592442  

 

ಸುಳ್ಯದಲ್ಲಿ ಇಂದು‌ ಬೆಳಿಗ್ಗೆ ಸುಮಾರು 9.13ಕ್ಕೆಲಘು ಭೂಕಂಪನದ ಅನುಭವವಾಗಿದೆ. ಸುಳ್ಯ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ಗಳಲ್ಲಿಯೂ ಕಂಪನದ ಅನುಭವವಾದ ಬಗ್ಗೆ ತಿಳಿದು ಬಂದಿದೆ.

]]>
http://sullia.suddinews.com/archives/592442/feed 0