ಸುಳ್ಯ ವೆಂಕಟರಮಣ ಸೊಸೈಟಿ ಮಹಾಸಭೆ

0

 

ಶೇ.1 ಕೋಟಿ 20 ಲಕ್ಷ ಲಾಭ : ಶೇ.15 ಡಿವಿಡೆಂಡ್

ಸೊಸೈಟಿಯಿಂದ ಎ.ಟಿ.ಎಂ. ಸೇವೆ, ಸಂಘದ ನಿರ್ದೇಶಕರು ಗೌರವಧನ ಪಡೆದುಕೊಳ್ಳಲು ಸದಸ್ಯರ ಸಲಹೆ

 

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸುಳ್ಯದ ಕೊಡಿಯಾಲಬೈಲು ಗೌಡರ ಸಮುದಾಯ ಭವನದಲ್ಲಿ ನಡೆಯಿತು.

 

ಸಂಘದ ಅಧ್ಯಕ್ಷ ಪಿ.ಸಿ. ಜಯರಾಮರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವರದಿ ಸಾಲಿನಲ್ಲಿ ಸಂಘವು 1 ಕೋಟಿ 20 ಲಕ್ಷ 89 ಸಾವಿರ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಂಘವು ಬೆಳ್ಳಿ ವರ್ಷದಲ್ಲಿದ್ದು ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗುವುದು. ಜತೆಗೆ 25 ವರ್ಷಕ್ಕೆ 25 ಶಾಖೆ ತೆರೆಯುವ ಗುರಿಯು ಇದೆ ಹಾಗೆ 25 ವರ್ಷಕ್ಕೆ ಶೇ.25 ಡಿವಿಡೆಂಡ್ ಸದಸ್ಯರಿಗೆ ವಿತರಿಸಬೇಕು ಅದಕ್ಕೆ ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.

 

ಸಂಘದ ವತಿಯಿಂದ ಎ.ಟಿ.
ಎಂ. ಸೇವೆ ಆರಂಭಿಸಬೇಕು, ಸಂಘದ ನಿರ್ದೇಶಕರು ಸಂಘದ ಬೆಳವಣಿಗೆಗೆ ಶ್ರಮಿಸುತ್ತಿದ್ದು ಸಂಘದಿಂದ ಗೌರವಧನ ಸ್ವೀಕರಿಸಬೇಕು, ಸಂಘದ ವತಿಯಿಂದ ಮರಣ ಸಾಂತ್ವನ ನಿಧಿ ಆರಂಭಿಸಬೇಕೆಂದು ಹೀಗೆ ಇನ್ನಿತರ ಸಲಹೆಯನ್ನು ಸದಸ್ಯರು ನೀಡಿದರು.

ಸಂಘದ ಉಪಾಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ.‌ಸದಾನಂದ, ಪಿ.ಎಸ್.ಗಂಗಾಧರ್, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಜಯಲಲಿತಾ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್ ಮಾವಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜೆ.ವಿ., ಜನರಲ್ ಮ್ಯಾನೇಜರ್ ಚಂದ್ರಶೇಖರ ಮೇರ್ಕಜೆ ವೇದಿಕೆಯಲ್ಲಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ವರದಿ ಮಂಡಿಸಿದರು.