ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆ – ಸನ್ಮಾನ

0

 

ಸಂಘದ ದಶಮಾನೋತ್ಸವ ನಡೆಸಲು ಸಿದ್ಧತೆ

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹರಿಶ್ಚಂದ್ರರವರ ಅಧ್ಯಕ್ಷತೆಯಲ್ಲಿ ಸೆ.18 ರಂದು ಶ್ರೀರಾಮ ಪೇಟೆಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನ್ಯಾಯವಾದಿ ಹಾಗೂ ಪಿಗ್ಮಿ ಸಂಗ್ರಾಹಕರ ಕಾನೂನು ಸಲಹೆಗಾರ ದಿನೇಶ್ ಮಡಪ್ಪಾಡಿ ಮತ್ತು ಸುಳ್ಯ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಕಾರ್ಯದರ್ಶಿ ರಾಮಚಂದ್ರ ಯದುಗಿರಿ ವಾರ್ಷಿಕ ವರದಿಯನ್ನು ಮಂಡಿಸಿದರು.

ಕೋಶಾಧಿಕಾರಿ ಪದ್ಮನಾಭ ನೆಕ್ರಾಜೆ ವಾರ್ಷಿಕ ಜಮಾ ಖರ್ಚಿನ ಬಗ್ಗೆ ವಿವರ ನೀಡಿದರು.
ಸಂಘದ ಉಪಾಧ್ಯಕ್ಷ ವಸಂತ ಬೋರ್ಕರ್ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
ಅಧ್ಯಕ್ಷ ಹರೀಶ್ಚಂದ್ರ ಎಂ.ರವರು ಮಾತನಾಡಿ ಸಂಘ ಬೆಳೆದು ಬಂದ ಬಗ್ಗೆ ವಿವರವನ್ನು ನೀಡುತ್ತಾ ಸಂಘಕ್ಕೆ ಹತ್ತು ವರ್ಷ ಆಗುತ್ತಿದ್ದು ಈ ಬಗ್ಗೆ ಸಂಘದ ದಶಮಾನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಪ್ರಸ್ತಾಪಿಸಿದರು.ಸಂಘದ ನಿರ್ದೇಶಕರು ,ಸದಸ್ಯರು ಈ ಬಗ್ಗೆ ಚರ್ಚಿಸಿದರು.
ದಿನೇಶ್ ಮಡಪ್ಪಾಡಿಯವರು ದಶಮಾನೋತ್ಸವ ಆಚರಣೆ ಮಾಡುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು.
*ಸಾಧಕರಿಗೆ ಸನ್ಮಾನ* ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ದೆಹಲಿ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ಭಾಗವಹಿಸಿದ ಎನ್.ಸಿ.ಸಿ.ಕೆಡೆಟ್ ಕು.ಸಾಹಿತ್ಯರವರನ್ನು
ಸಂಘದ ವತಿಯಿಂದ ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಾಮಚಂದ್ರ ಯದುಗಿರಿ ಸನ್ಮಾನ ಪತ್ರ ವಾಚಿಸಿದರು.
ಶೈಕ್ಷಣಿಕ ಸಾಧನೆ ಮಾಡಿದ ನಿತ್ಯಾಶ್ರೀ ,ಹರ್ಷರಾಜ್ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಅವರ ಪೋಷಕರು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.
ಕು.ಲತಾ ಮತ್ತು ತೇಜಸ್ವಿ ಪ್ರಾರ್ಥಿಸಿ, ರಾಮಚಂದ್ರ ಯದುಗಿರಿ ಕಾರ್ಯಕ್ರಮ ನಿರೂಪಿಸಿ, ಜತೆಕಾರ್ಯದರ್ಶಿ ಮಹಾಬಲ ರೈ ವಂದಿಸಿದರು.

 

ಸಂಘದ ಪದಾಧಿಕಾರಿಗಳ ಮರು ಆಯ್ಕೆ
ಸಂಘಕ್ಕೆ ಈಗಿರುವ ಪದಾಧಿಕಾರಿಗಳನ್ನು ಮರು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹರಿಶ್ಚಂದ್ರ ಎಂ, ಉಪಾಧ್ಯಕ್ಷರಾಗಿ ವಸಂತ ಬೋರ್ಕರ್, ಕಾರ್ಯದರ್ಶಿಯಾಗಿ ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿಯಾಗಿ ಮಹಾಬಲ ರೈ, ಕೋಶಾಧಿಕಾರಿ ಪದ್ಮನಾಭ ನೆಕ್ರಾಜೆ, ನಿರ್ದೇಶಕರಾಗಿ ರಾಧಾಕೃಷ್ಣ,ಲಕ್ಷ್ಮೀಶ್ ಶೆಟ್ಟಿ,ಪುಷ್ಪಾಧರ,ಕು.ಲತಾ,ಹಿರಿಯಣ್ಣ,ಶ್ರೀಮತಿ ಆರತಿಯವರು ಮರು ಆಯ್ಕೆಯಾದರು.
ಶ್ರೀಮತಿ ರತ್ನಾವತಿ,ಸುನಿಲ್ ಜೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದರು.