ಸುಬ್ರಹ್ಮಣ್ಯ-ಐನಕಿದು ಪ್ರಾ.ಕೃ.ಪ.ಸ. ಸಂಘ ಸುಬ್ರಹ್ಮಣ್ಯದ ಮಹಾಸಭೆ

0

22.76 ಲಕ್ಷ ಲಾಭಾಂಶ, ಶೇ. 7 ಡಿವಿಡೆಂಡ್ ಘೋಷಣೆ

ಸುಬ್ರಹ್ಮಣ್ಯ-ಐನಕಿದು ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆಯು ಸೆ. ೧೮ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನ ಸುಬ್ರಹ್ಮಣ್ಯದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ ಕೂಜುಗೋಡು ಅವರ ಅಧ್ಯಕ್ಷತೆಯಲ್ಲಿ ಜರಗಿತು.

 

೨೦೨೧-೨೦೨೨ನೇ ಸಾಲಿನಲ್ಲಿ ಸಂಘವು 102.60 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 22.76 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಶೇರ್ ದಾರರಿಗೆ ಶೇ. 7 ದರದಲ್ಲಿ ಡಿವಿಡೆಂಡ್ ಕೊಡಲು ತೀರ್ಮಾನಿಸಲಾಯಿತು. ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಕೆ.ಯಸ್. ಮಂಡಿಸಿದರು. ವರದಿ ಸಾಲಿನಲ್ಲಿ ೧೬.೨೦ ಕೋಟಿ ಸಾಲ ವಿತರಿಸಿ, ೧೫.೪೩ ಕೋಟಿ ಸಾಲ ವಸೂಲಿ ಮಾಡಿ ವರ್ಷಾಖೇರಿಗೆ ೧೬.೫೬ ಕೋಟಿ ಸಾಲ ಇರುತ್ತದೆ. ಶೇ. ೯೩.೭೦ ಸಾಲ ವಸೂಲಿಯಾಗಿರುತ್ತದೆ. ಆಡಿಟ್ ವರ್ಗೀಕರಣ ‘ಬಿ’ ತರಗತಿಯದ್ದಾಗಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ ಕುಜುಂಬಾರು ದಂಪತಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿಗಳಾದ ಶ್ರೀಮತಿ ನಾಗವೇಣಿ ಯಸ್ ನೂಚಿಲ ಸುಬ್ರಹ್ಮಣ್ಯ ಮತ್ತು ಮುಕುಂದ ಗೌಡ ಐ ಇಜಿನಡ್ಕ ಐನೆಕಿದು ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ, ಯಸ್.ಯಸ್.ಯಲ್.ಸಿ, ಏಳನೇತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು, ಸ್ವಂತ ಬಂಡವಾಳದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ ಸದಸ್ಯರನ್ನು, ಅತೀ ಹೆಚ್ಚು ಪಿಗ್ಮಿ ಠೇವಣಿ ನೀಡಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಮಹಾಸಭೆಯ ಹಾಜರಾತಿಯಲ್ಲಿ ದಾಖಲೆಯ ಹಾಜರಾತಿ ೯೯೧ ಆಗಿದ್ದು ಶೇ. ೬೬.೩೩ ಆಗಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಹರ್ಷ ವ್ಯಕ್ತಪಡಿಸಿದರು.

 

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಾಧವ ಡಿ, ನಿರ್ದೇಶಕರುಗಳಾದ ಸೋಮಸುಂದರ ಕೆ, ರವೀಂದ್ರ ಕುಮಾರ ರುದ್ರಪಾದ, ಮೋಹನದಾಸ ರೈ, ವೆಂಕಟೇಶ. ಹೆಚ್. ಯಲ್, ಸುರೇಶ ಕೋಟೆಬೈಲು, ದಾಮೋದರ ಕೆ , ಕಿರಣ ಪೈಲಾಜೆ, ಸುಬ್ರಹ್ಮಣ್ಯ ರಾವ್ ಎ, ಶ್ರೀಮತಿ ಬಾರತಿ ದಿನೇಶ್, ಶ್ರೀಮತಿ ಆಶಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಜಯಪ್ರಕಾಶ ಕೂಜುಗೋಡು ಸ್ವಾಗತಿಸಿ ನಿರ್ದೇಶಕ ರವೀಂದ್ರ ಕುಮಾರ ರುದ್ರಪಾದ ವಂದಿಸಿದರು. ಸೊಸೈಟಿಯ ಸಿಬ್ಬಂದಿಗಳು ಸಹಕರಿಸಿದರು.