ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ : ಯುವಕನ ವಿರುದ್ಧ ದೂರು

0

 

ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರ ಗೈದ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಯುವತಿಯ ಮನೆಯವರು ನೀಡಿದ ದೂರಿನ ಮೇರೆಗೆ ಉಬರಡ್ಕ ಮಿತ್ತೂರಿನ ಯುವಕನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಉಬರಡ್ಕ ಮಿತ್ತೂರಿನ ತೀರ್ಥಪ್ರಸಾದ್ (25) ತಿಳಿದು ಬಂದಿದೆ.

ವಿದ್ಯಾರ್ಥಿನಿ ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಆಗಾಗ ಹೊಟ್ಟೆ ನೋವು ಆಗುತ್ತಿರುವುದಾಗಿ ಮನೆಯಲ್ಲಿ ಹೇಳುತಿದ್ದಳೆಂದೂ ಸೆ.26ರಂದು ಸುಳ್ಯ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬರುವಂತೆ ಸೂಚಿಸಿದರು. ಸ್ಕ್ಯಾನಿಂಗ್‌ ಮಾಡಿಸಿ ವರದಿ ಪರಿಶೀಲನೆ ಮಾಡಿ ವಿದ್ಯಾರ್ಥಿನಿ ಗರ್ಭವತಿಯಾಗಿರುವುದು ತಿಳಿದು‌ ಬಂತು. ಆಕೆಯನ್ನು ಮನೆಯವರು ವಿಚಾರಿಸಿದಾಗ ಕಳೆದ 4 ತಿಂಗಳ ಹಿಂದೆ ವಾಟ್ಸ್‌ ‌‌ಆಪ್‌ ಗ್ರೂಪ್‌ನಲ್ಲಿ ಉಬರಡ್ಕದ ತೀರ್ಥಪ್ರಸಾದ್‌ ಎಂಬವನ ಪರಿಚಯವಾಗಿತ್ತು. ಆ ಬಳಿಕ ನಾವಿಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು. ಜೂ.30 ರಂದು ತೀರ್ಥ ಪ್ರಸಾದ್ ಸುಳ್ಯಕ್ಕೆ ಬಾ ಮಾತನಾಡಲಿಕ್ಕಿದೆ ಎಂದು ಹೇಳಿದ ಪ್ರಕಾರ ನಾನು ಹೋಗಿದ್ದೆ. ನನ್ನನ್ನು ಆತ ಜ್ಯೂನಿಯರ್‌ ಕಾಲೇಜು ಬಳಿ ಆತನ ಸ್ನೇಹಿತನ ರೂಮ್‌ಗೆ ಕರೆದುಕೊಂಡು ಹೋಗಿ. ಲೈಂಗಿಕ ಕ್ರಿಯೆ ನಡೆಸಿ ಈ ವಿಚಾರವನ್ನು ಯಾರಿಗೂ ಹೇಳಬೇಡವೆಂದು ತಿಳಿಸಿದ್ದ ಎಂದು ಆಕೆ ಮನೆಯವರೊಂದಿಗೆ ತಿಳಿಸಿದಳೆಂದೂ ತಿಳಿದು ಬಂದಿದೆ. ಈ ಬಗ್ಗೆ ಆಕೆಯ ಮನೆಯವರು ಪೋಲೀಸರಿಗೆ ದೂರು ನೀಡಿದ್ದು ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಪುಸಲಾಯಿಸಿ ಲೈಂಗಿಕ ಕ್ರಿಯೆ ನಡೆಸಿರುವ ತೀರ್ಥಪ್ರಸಾದ್‌ನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಸುಳ್ಯ ಪೋಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.