ಮಹಾ ಶಿವರಾತ್ರಿ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾರೀ ಭಕ್ತರು

0

ಮಹಾಶಿವರಾತ್ರಿ ಹಾಗೂ ರಜಾ ಹಿನ್ನಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಫೆ.19 ರಂದು ಬಾರೀ ಸಂಖ್ಯೆಯ ಭಕ್ತರ ಆಗಮನವಾಗಿದೆ.
ಮಹಾ ಶಿವರಾತ್ರಿ ಅಂಗವಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಾರೆ. ಬಳಿಕ ಮರುದಿನ ಧರ್ಮಸ್ಥಳದಿಂದ ನೇರವಾಗಿ ಕುಕ್ಕೆಗೆ ಆಗಮಿಸುತ್ತಾರೆ. ಇದರಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾರೀ ಸಂಖ್ಯೆಯ ಭಕ್ತರ ಸಂಧಣಿ ಕಂಡುಬಂದಿದೆ. ಕ್ಷೇತ್ರಕ್ಕೆ ಅಡಗಮಿಸಿದ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ನೆರವೇರಿಸಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಬಂದು ಶ್ರೀ ದೇವರ ದರುಶನ ಪಡೆಯುತ್ತಾರೆ.


ಮುಂಜಾನೆಯಿಂದಲೇ ದೇವಸ್ಥಾನ ಹಾಗೂ ಕುಮಾರಧಾರ ಸ್ನಾನ ಘಟ್ಟ ಬಳಿ ಬಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸ್ನಾನಘಟ್ಟ ಸಂಪೂರ್ಣ ಭಕ್ತರಿಂದಲೇ ತುಂಬಿತ್ತು. ಬಳಿಕ ಕ್ಷೇತ್ರದ ದೇವಸ್ಥಾನದೊಳಗೂ ಭಕ್ತರ ಸಂಧಣಿ ಕಂಡುಬಂದಿದೆ. ಪೇಟೆಯಲ್ಲೂ ಬಾರೀ ವಾಹನ ಹಾಗೂ ಜನರ ಓಡಾಟ ಇದ್ದು, ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ವಾಹನ ನಿಲುಗಡೆ ಹಾಗೂ ಭಕ್ತರಿಗೆ ಪೂರಕ ವ್ಯವಸ್ಥೆ ಹಾಗೂ ಮಾರ್ಗದರ್ಶನ ನೀಡಿದರು.