ಮಾ.12 ರಂದು ಸುಳ್ಯದಲ್ಲಿ ಪೋಷಕರ ಪುನಶ್ಚೇತನ ಕಾರ್ಯಾಗಾರ

0

ಸುಳ್ಯದ ಅಂಜಲಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್ ಇದರ ಆಶ್ರಯದಲ್ಲಿ ಪೋಷಕರ ಪುನಶ್ವೇತನ ಕಾರ್ಯಾಗಾರ ಮಾ. 12 ರಂದು ಬೆಳಗ್ಗೆ ಸುಳ್ಯ ಅಂಬಟೆಡ್ಕದಲ್ಲಿರುವ ವರ್ತಕರ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ಹೇಳಿದ್ದಾರೆ.


ಮಾ.೪ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೊಂಟೆಸ್ಸೋರಿ ಕಲಿಕಾ ಪದ್ಧತಿಯ ತತ್ವಶಾಸ್ತ್ರ ಮತ್ತು ವಿಧಾನಗಳನ್ನು ಪೋಷಕರಿಗೆ ತಿಳಿಸುವುದು ಕಾರ್ಯಾಗಾರದ ಮುಖ್ಯ ಉzಶ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇದ್ರೀಸ್ ಪಾಷಾ ರವರು ಮಗುವಿನ ಸಮರ್ಪಕ ಕಲಿಕೆಯಲ್ಲಿ ಪೋಷಕರ ಪಾತ್ರದ ಕುರಿತು ಹಾಗೂ ಶಿವಮೊಗ್ಗದ ಪೋದಾರ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಾಂಶುಪಾಲ ಸುಕೇಶ್ ಸೇರಿಗಾರ್‌ರವರು ಸಂತಸದ ಪೋಷಕತ್ವದ ಬಗ್ಗೆ ತಿಳಿಸಲಿದ್ದಾರೆ ಎಂದು ಅವರು ಹೇಳಿದರು.


ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ.ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುವುದು. ಪೋಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಶುಭಕರ ಬೊಳುಗಲ್ಲು, ಟ್ರಸ್ಟಿ ಡಾ| ಕೆ.ಟಿ. ವಿಶ್ವನಾಥ್ ಇದ್ದರು.