ಎಲಿಮಲೆ ಪ್ರೌಢಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಸರ್ಕಾರಿ ಪ್ರೌಢಶಾಲೆ ಎಲಿಮಲೆಗೆ ಶಿಕ್ಷಣ ಇಲಾಖೆಯಿಂದ ಮಂಜೂರಾಗಿರುವ ಎರಡು ಕೊಠಡಿಗಳಿಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ದೇವಚಳ್ಳ ಗ್ರಾ.ಪಂ.ಸದಸ್ಯೆ ಪ್ರೇಮಾಲತಾ ಕೇರ, ನೆ.ಕೆಮ್ರಾಜೆ ಗ್ರಾ.ಪಂ.ಸದಸ್ಯರಾದ ರಾಮಚಂದ್ರ ಪ್ರಭು, ವಂದನಾ ಹೊಸ್ತೋಟ, ದೇವಚಳ್ಳ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿ ಪ್ರಸಾದ್ ಬಿ.ವಿ., ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಜಯಂತ ಹರ್ಲಡ್ಕ, ದೇವಚಳ್ಳ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ್ ಕುಚ್ಚಾಳ, ಎಲಿಮಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಹಾಗೂ ನಾಗರಾಜ ಕೇಪಳಕಜೆ, ವಿಶ್ವನಾಥ ಕಾಯರಡಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಮುರಳೀಧರ ಪುನ್ಕುಟ್ಟಿ ಸ್ವಾಗತಿಸಿ, ಶಿಕ್ಷಕ ವಸಂತ ಮಾಸ್ತರ್ ವಂದಿಸಿದರು.