ಐವರ್ನಾಡು ಪರ್ಲಿಕಜೆಯಲ್ಲಿ ಧರ್ಮದೈವ ಅಣ್ಣಪ್ಪ ಪಂಜುರ್ಲಿ ಮತ್ತು ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವ

0

ಐವರ್ನಾಡು ಗ್ರಾಮದ ಪರ್ಲಿಕಜೆ ಮನೆಯಲ್ಲಿ ಧರ್ಮದೈವ ಅಣ್ಣಪ್ಪ ಪಂಜುರ್ಲಿ,ಮಂತ್ರವಾದಿ ಗುಳಿಗ,ಅಗ್ನಿ ಕೊರತ್ತಿ,ಕಲ್ಲುರ್ಟಿ, ಕೊರಗ ತನಿಯ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವವು ಮಾ.24 ಮತ್ತು ಮಾ.25 ರಂದು ಭಕ್ತಿ ,ಸಂಭ್ರಮದಿಂದ ನಡೆಯಿತು.
ಮಾ.24 ರಂದು ಬೆಳಿಗ್ಗೆ ಕ್ಕೆ ಸ್ವಸ್ತಿ ಪುಣ್ಯಹವಾಚನ,ಸ್ಥಳ ಶುದ್ಧಿ, ಗಣಪತಿ ಹವನ, ಪ್ರಸಾದ ವಿತರಣೆ ನಡೆಯಿತು.


ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ,ಸಂಜೆ ರಾಹುಗುಳಿಗನ ಕೋಲ, ನಂತರ ಸಂಜೆ ದೈವಗಳ ಭಂಡಾರ ತೆಗೆಯಲಾಯಿತು.
ರಾತ್ರಿ ಗುರು ಉಳ್ಳಾಲ್ತಿ ಹಾಗೂ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು.ನಂತರ ಭಕ್ತಾದಿಗಳಿಗೆ ಅ ನ್ನದಾನ ನಡೆಯಿತು.


ನಂತರ ಮಂತ್ರವಾದಿ ಗುಳಿಗ ಹಾಗೂ ಅಗ್ನಿ ಕೊರತ್ತಿಯ ನೇಮೋತ್ಸವ ನಡೆಯಿತು.
ಮಾ.25 ರಂದು ಬೆಳಿಗ್ಗೆ ಶ್ರೀ ಶಿರಾಡಿ ದೈವಕ್ಕೆ ತಂಬಿಲ, ಮಾರಿಕಳ ನಡೆಯಿತು.


ಬೆಳಿಗ್ಗೆ ಗಂಟೆ 8.00 ಕ್ಕೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಗಂಟೆ 2.00 ರಿಂದ ಕೊರಗ ತನಿಯ ದೈವದ ನೇಮೋತ್ಸವ,ಕಟ್ಟೆ ಪ್ರತಿಷ್ಠೆ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಮನೆಯ ಯಜಮಾನಿ ಶ್ರೀಮತಿ ನೀಲಮ್ಮ ಮತ್ತು ಮನೆಯವರು ಹಾಗೂ ಬಾಳಿಲ ಕುಟುಂಬಸ್ಥರು ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.